ನವದೆಹಲಿ: ಕುಂಠಿತಗೊಂಡಿರುವ ಆರ್ಥಿಕತೆಗೆ ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರವು, ಸಿಂಗಲ್ ಬ್ರ್ಯಾಂಡ್ ರಿಟೇಲ್, ಡಿಜಿಟಲ್ ಮಾಧ್ಯಮ ಮತ್ತು ಉತ್ಪಾದನಾ ವಲಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಗೆ ನಿಯಮಗಳನ್ನು ಸಡಿಲಗೊಳಿಸಲು ನಿರ್ಧರಿಸಿದೆ.
ಬುಧವಾರ ಸಂಜೆ ನಡೆದ ಸಂಪುಟ ಸಭೆಯ ಬಳಿಕ ಪ್ರತಿಕ್ರಿಯೆಯನ್ನು ನೀಡಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು, ” ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರಿಗಳಿಗೆ ಭಾರತದಿಂದ ಶೇ 30 ರಷ್ಟು ಸೋರ್ಸಿಂಗ್ ಮತ್ತು ಶೇ.100ರಷ್ಟು ಹೂಡಿಕೆಗೆ ಅವಕಾಶ ನೀಡುವಂತೆ ಗುತ್ತಿಗೆ ಉತ್ಪಾದನೆಯ ಕಾನೂನುಬದ್ಧಗೊಳಿಸುವಿಕೆ ಸೇರಿದಂತೆ ಹಲವು ಹೂಡಿಕೆ ಸ್ನೇಹಿ ನೀತಿಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ” ಎಂದಿದ್ದಾರೆ.
ಈ ಕ್ರಮದ ಭಾಗವಾಗಿ, ಮುದ್ರಣ ಮಾಧ್ಯಮದ ಮಾದರಿಯಲ್ಲೇ ಸುದ್ದಿಗಳನ್ನು ಅಪ್ಲೋಡ್ ಮತ್ತು ಸ್ಟ್ರೀಮಿಂಗ್ ಮಾಡಲು ಡಿಜಿಟಲ್ ಮಾಧ್ಯಮಗಳಿಗೂ ಶೇ 26 ರಷ್ಟು ಸಾಗರೋತ್ತರ ಹೂಡಿಕೆಗೆ ಅನುಮೋದನೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರಕ್ಕಾಗಿ, ಶೇ.30 ರಷ್ಟು ಸ್ಥಳೀಯ ಸೋರ್ಸಿಂಗ್ ಕಡ್ಡಾಯ ಎಂಬ ನಿಯಮಗಳನ್ನು ಸಡಿಲಿಸಲಾಗಿದೆ. ಸ್ಥಳೀಯ ಸೋರ್ಸಿಂಗ್ ವರ್ಷದಿಂದ ವರ್ಷಕ್ಕೆ ಇರುವುದಿಲ್ಲ, ಬದಲಿಗೆ ಇದನ್ನು ಐದು ವರ್ಷಗಳ ಬ್ಲಾಕ್ಗಳಾಗಿ ಪರಿಗಣಿಸಲಾಗುತ್ತದೆ. ಇದು ಸಂಸ್ಥೆಗಳಿಗೆ ಹೆಚ್ಚಿನ ನಮ್ಯತೆಯನ್ನು ನೀಡಲಿದೆ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಸುಲಲಿತಗೊಳಿಸಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಸಭೆಯನ್ನು ನಡೆಸಲಾಗಿದ್ದು, ಸಿಂಗಲ್ ಬ್ರ್ಯಾಂಡ್ ರಿಟೇಲ್ ಸಂಸ್ಥೆಯು ತನ್ನ ಬ್ರ್ಯಾಂಡ್ಗಾಗಿ ಭಾರತದಿಂದ ಮಾಡಿದ ಎಲ್ಲಾ ಖರೀದಿಗಳನ್ನು ಸ್ಥಳೀಯ ಸೋರ್ಸಿಂಗ್ ಎಂದೇ ಪರಿಗಣಿಸಬೇಕೆಂದು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.