ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬ್ರ್ಯಾಂಡ್ ಅಂಬಾಸಿಡರ್ವೊಬ್ಬಳನ್ನು ನೇಮಿಸಿದ್ದಾರೆ. ಆಕೆ ಸಿನಿಮಾ ತಾರೆ ಅಥವಾ ಕ್ರೀಡಾ ತಾರೆ ಅಲ್ಲ, ಬದಲಿಗೆ ಆಕೆ ಯುವ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿ. ಐಐಟಿ-ಜೀ ಪರೀಕ್ಷೆಯ ಟಾಪರ್.
ಕೃತಿ ತಿವಾರಿ ಎಂಬ ಮಧ್ಯಪ್ರದೇಶ ಮೂಲದ ಐಐಟಿ ಟಾಪರ್ ಈಗ ಡಿಜಿಟಲ್ ಇಂಡಿಯಾ ಯೋಜನೆಯನ್ನು ದೇಶದಾದ್ಯಂತ ಪ್ರಚುರಪಡಿಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾಳೆ. ಒಂದು ವರ್ಷದವರೆಗೆ ಆಕೆ ಈ ಯೋಜನೆಯ ರಾಯಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾಳೆ.
ಇದು ನನಗೆ ದೊರೆತಿರುವ ಅದ್ಭುತ ಅವಕಾಶ, ಇಷ್ಟು ದೊಡ್ಡ ಯೋಜನೆಗೆ ಅದೂ ಕೂಡ ಸರ್ಕಾರದ ವತಿಯಿಂದ ರಾಯಭಾರಿಯಾಗಿ ಆಯ್ಕೆ ಆಗುತ್ತೇನೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಮಾಡಬಯಸಿದ್ದರು, ಇ-ಲಾಕರ್, ಇ-ಸ್ಕಾಲರ್ಶಿಪ್ಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರಧಾನಿ ಯುವಕರನ್ನು ರಾಯಭಾರಿಯನ್ನಾಗಿ ಮಾಡ ಬಯಸಿದ್ದರು. ಅದಕ್ಕಾಗಿ ಅವರು ನನ್ನನ್ನು ಆಯ್ಕೆ ಮಾಡಿಕೊಂಡರು. ವಿದ್ಯಾರ್ಥಿಗಳಲ್ಲಿ, ದೇಶದ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಾನು ಮಾಡುತ್ತೇನೆ ಎಂದು ಕೃತಿ ಸಂತೋಷದಿಂದ ನುಡಿದಿದ್ದಾಳೆ.
ಐಐಟಿಯಲ್ಲಿ ಟಾಪರ್ ಆಗಿ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಆಗಿದ್ದ ಕೃತಿ ಇನ್ನು ಮುಂದೆ ಡಿಜಿಟಲ್ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದಾಳೆ. ಸೆಲೆಬ್ರಿಟಿಗಳನ್ನು ಇಂತಹ ಯೋಜನೆಗೆ ಹಾಕಿಕೊಳ್ಳದೆ ನಿಜವಾದ ಸಾಧಕಿಯೊಬ್ಬಳಿಗೆ ರಾಯಭಾರತ್ವವನ್ನು ನೀಡಿ ಪ್ರಧಾನಿ ಉತ್ತಮ ಕಾರ್ಯವನ್ನೇ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.