ನವದೆಹಲಿ: ಭಾರತದ ರಾಜ್ಯಗಳಾದ್ಯಂತ ಸೌರ ಮೇಲ್ಛಾವಣಿಗೆ ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಅಳೆಯುವ ಗುರಿಯನ್ನು ಹೊಂದಿರುವ ಸ್ಟೇಟ್ ರೂಫ್ಟಾಪ್ ಸೋಲಾರ್ ಅಟ್ರ್ಯಾಕ್ಟಿವ್ನೆಸ್ ಇಂಡೆಕ್ಸ್-SARAL (ಮೇಲ್ಛಾವಣಿ ಸೌರ ಆಕರ್ಷಣೆ ಸೂಚ್ಯಾಂಕ)ನಲ್ಲಿ ಕರ್ನಾಟಕವು ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ತೆಲಂಗಾಣ, ಗುಜರಾತ್ ಮತ್ತು ಆಂಧ್ರಪ್ರದೇಶ ಕ್ರಮವಾಗಿ ಎರಡನೇ, ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಶಕ್ತಿ ಸುಸ್ಥಿರ ಇಂಧನ ಪ್ರತಿಷ್ಠಾನ (SSEF), ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಆಫ್ ಇಂಡಿಯಾ (ASSOCHAM) ಮತ್ತು ಅರ್ನ್ಸ್ಟ್ & ಯಂಗ್ (EY)ನ ಸಹಯೋಗದೊಂದಿಗೆ ಈ ಸೂಚ್ಯಾಂಕವನ್ನು ಅಭಿವೃದ್ಧಿಪಡಿಸಿದೆ.
2022 ರ ವೇಳೆಗೆ 175 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಉತ್ಪಾದಿಸುವ ಗುರಿಯ ಅನುಗುಣವಾಗಿ ಸೂಚ್ಯಾಂಕವನ್ನು ರಚಿಸಲಾಗಿದೆ. ಸೌರಶಕ್ತಿಯಿಂದ 100 GW ಗುರಿಯನ್ನು ಪೂರೈಸಬೇಕಾಗಿದೆ, ಇದರಲ್ಲಿ 40 GW ಗ್ರಿಡ್ ಸಂಪರ್ಕಿತ ಸೌರ ಮೇಲ್ಛಾವಣಿಯಿಂದ ಬರುವ ನಿರೀಕ್ಷೆಯಿದೆ.
ಸೂಚ್ಯಾಂಕವು ನೀತಿ ಚೌಕಟ್ಟಿನ ದೃಢತೆ, ಅನುಷ್ಠಾನ ಪರಿಸರ, ಹೂಡಿಕೆ ವಾತಾವರಣ, ಗ್ರಾಹಕರ ಅನುಭವ, ವ್ಯಾಪಾರ ಪರಿಸರ ವ್ಯವಸ್ಥೆಯ ಐದು ಅಂಶಗಳ ಆಧಾರದ ಮೇಲೆ ರಾಜ್ಯದ ಸೌರ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಅಳೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.