ನವದೆಹಲಿ: ಸ್ವಚ್ಛ ಭಾರತ ಅಭಿಯಾನ ಆರಂಭಗೊಂಡು ಹಲವು ತಿಂಗಳುಗಳೇ ಉರುಳಿವೆ, ಆದರೆ ಸ್ವಚ್ಛತೆ ಮಾತ್ರ ಇನ್ನೂ ಮರಿಚಿಕೆಯಾಗಿದೆ. ಸರ್ಕಾರಿ ಕಛೇರಿಗಳು ಕೂಡ ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯವನ್ನು ತೋರಿಸುತ್ತಿವೆ.
ರಾಷ್ಟ್ರ ರಾಜಧಾನಿಯಲ್ಲಿನ 49 ಸರ್ಕಾರಿ ಕಟ್ಟಡಗಳ ಸ್ವಚ್ಛತೆಯನ್ನು ಆಧಾರಿಸಿ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿದೆ. ವಿಜ್ಞಾನ ಭವನ, ಹೈದರಾಬಾದ್ ಹೌಸ್ ಮತ್ತು ಜವಹಾರ್ ಲಾಲ್ ನೆಹರು ಭವನ ಸ್ವಚ್ಛತೆಯ ವಿಷಯದಲ್ಲಿ ಅಗ್ರ ಸ್ಥಾನದಲ್ಲಿವೆ. ಆದರೆ ರಾಷ್ಟ್ರಪತಿ ಭವನ ಸೇರಿದಂತೆ ಅನೇಕ ಕಚೇರಿಗಳು ಹಿಂದಿದೆ.
ಹೈದರಾಬಾದ್ ಹೌಸ್, ವಿಜ್ಞಾನ ಭವನ, ನೆಹರೂ ಭವನಗಳು ತಲಾ 20 ಅಂಕಗಳನ್ನು ಪಡೆದುಕೊಂಡಿದೆ. ರಾಷ್ಟ್ರಪತಿ ಭವನ 6 ಅಂಕ, ಸರ್ದಾರ್ ವಲ್ಲಭಾ ಭಾಯ್ ಪಟೇಲ್ ಭವನ 18 ಅಂಕಗಳನ್ನು ಮತ್ತು ಸೌಥ್ ಬ್ಲಾಕ್ 14 ಅಂಕಗಳನ್ನು, ಸಿಎಜಿ ಕಚೇರಿ 17 ಅಂಕಗಳನ್ನು, ಕೃಷಿ ಭವನ ಮತ್ತು ಶಾಸ್ತ್ರಿ ಭವನ 8 ಅಂಕಗಳನ್ನು ಪಡೆದುಕೊಂಡಿದೆ.
ಕಟ್ಟಡ ಮತ್ತು ಅದರ ಆವರಣದ ನೈರ್ಮಲ್ಯತೆ, ಕಸದ ಡಬ್ಬಗಳ ಲಭ್ಯತೆ ಮುಂತಾದುವುಗಳನ್ನು ಗಮನಿಸಿ ಅಂಕ ನೀಡಲಾಗುತ್ತದೆ. ನೈರ್ಮಲ್ಯ ಸೌಕರ್ಯಗಳಿಗೆ ಹತ್ತಕ್ಕೆ ಹತ್ತು, ಶುಚಿತ್ವಕ್ಕೆ ಎಂಟು ಹಾಗೂ ಕಸದ ಡಬ್ಬಿಗಳ ಲಭ್ಯತೆಗೆ ಎರಡು, ಹೀಗೆ ತಲಾ 20 ಅಂಕಗಳನ್ನು ನೀಡಲಾಗುತ್ತದೆ. ಹೈದರಾಬಾದ್ ಹೌಸ್ ಮತ್ತು ವಿಜ್ಞಾನ ಭವನ ಮಾತ್ರ ಸಂಪೂರ್ಣ ಅಂಕಗಳನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.