ಮುಂಬಯಿ: ತೀವ್ರ ಪ್ರವಾಹದಿಂದ ಪೀಡಿತಗೊಂಡಿರುವ ಮಹಾರಾಷ್ಟ್ರದ ಜನರು ಕಷ್ಟಕಾಲದಲ್ಲಿ ತಮ್ಮ ಮಾನವೀಯ ಮುಖವನ್ನು ಅನಾವರಣಗೊಳಿಸುತ್ತಿದ್ದಾರೆ. ಪ್ರವಾಹ ಪೀಡಿತ ಜನರಿಗೆ ಮುಂಬರುವ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲು ಸಹಾಯ ಮಾಡುವ ಸಲುವಾಗಿ ಶಿಲ್ಪಿ ಸಚಿನ್ ಸೇತೆ ಎಂಬುವವರು ಗಣಪತಿ ವಿಗ್ರಹಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದಾರೆ.
“ದೇಶಾದ್ಯಂತದ ಜನರು ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ. ಅವರು ಆಹಾರವನ್ನು ಕಳುಹಿಸುತ್ತಿದ್ದಾರೆ ಮತ್ತು ಪ್ರವಾಹ ಪೀಡಿತ ಜನರ ಮನೆಗಳನ್ನು ಪುನರ್ನಿರ್ಮಿಸಲು ಸಹಾಯ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಈ ಹಬ್ಬದ ದಿನಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲು ಜನರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ವಿಗ್ರಹಗಳನ್ನು ಕಳುಹಿಸುವುದು ಬಹಳ ಅನನ್ಯ ಮತ್ತು ಒಳ್ಳೆಯ ನಿರ್ಧಾರವಾಗಿದೆ” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಪುಣೆಯಲ್ಲಿಯೇ ಕನಿಷ್ಠ 54 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ಪ್ರದೇಶಗಳು ಹೆಚ್ಚು ಪೀಡಿತ ಪ್ರದೇಶಗಳಾಗಿವೆ.
ಗಣೇಶ ಹಬ್ಬವನ್ನು ಹಲವಾರು ಪ್ರವಾಹ ಪೀಡಿತರಿಗೆ ಈ ಬಾರಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗಣಪತಿ ಮೂರ್ತಿಗಳನ್ನು ಆಯಾ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಬೇಕಾದವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಸೇತಿ ಹೇಳಿದ್ದಾರೆ.
ಈಗಾಗಲೇ ಮೊದಲ ಬ್ಯಾಚಿನ ಗಣಪನ ಮೂರ್ತಿಗಳನ್ನು ನೆರೆ ಸಂತ್ರಸ್ಥರಿಗೆ ಕಳುಹಿಸಿಕೊಡಲಾಗಿದೆ.
ಮಹಾರಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬಹುತೇಕ ಮಂದಿ ಮನೆಗಳಲ್ಲೇ ಗಣಪನ ಮೂರ್ತಿಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.