ನವದೆಹಲಿ : ಸೆರ್ಬಿಯಾದ ವರ್ಬಾಸ್ನಲ್ಲಿ ನಡೆದ 3ನೇ ನೇಷನ್ಸ್ ಕಪ್ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿರುವ ಭಾರತದ ಕಿರಿಯ ಬಾಕ್ಸರ್ಗಳು ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಒಟ್ಟು 12 ಪದಕಗಳನ್ನು ಜಯಿಸಿಕೊಂಡಿದ್ದಾರೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ 22 ತಂಡಗಳಲ್ಲಿ ಭಾರತೀಯ ತಂಡವು ಎರಡನೇ ಅತ್ಯುತ್ತಮ ತಂಡವಾಗಿ ಹೊರಹೊಮ್ಮಿದೆ.
48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ತಮನ್ನಾ, ‘ಅತ್ಯುತ್ತಮ ವಿದೇಶಿ ಬಾಕ್ಸರ್’ ಪ್ರಶಸ್ತಿ ಪಡೆದರು. ಅವರು (48 ಕೆಜಿ) ರಷ್ಯಾದ ಅಲೆನಾ ಟ್ರೆಮಾಸೊವಾ ವಿರುದ್ಧ 5-0 ಅಂತರದ ಗೆಲುವು ದಾಖಲಿಸಿದರು. 57 ಕೆಜಿಯಲ್ಲಿ ಅಂಬೇಶೋರಿ ದೇವಿ, 60 ಕೆಜಿಯಲ್ಲಿ ಪ್ರೀತಿ ದಾಹಿಯಾ ಮತ್ತು 66 ಕೆಜಿಯಲ್ಲಿ ಪ್ರಿಯಾಂಕಾ ಚಿನ್ನದ ಪದಕ ಗೆದ್ದಿದ್ದಾರೆ.
ಐಐಎಸ್ ಬಾಕ್ಸರ್ಗಳಾದ ಅಂಜು ದೇವಿ, ಸಿಮ್ರಾನ್ ಮತ್ತು ದೀಕ್ಷಾಂತ್ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕಗಳನ್ನು ಪಡೆದರು.
ಆಶ್ರಯ ನಾಯಕ್ ಮತ್ತು ನೇಹಾ ಕ್ರಮವಾಗಿ 63 ಕೆಜಿ ಮತ್ತು 54 ಕೆಜಿಯಲ್ಲಿ ಕಂಚಿನ ಪದಕ ಗೆದ್ದರು. ಖುಷಿ (70 ಕೆಜಿ) ಮತ್ತು ಅಲ್ಫಿಯಾ ಅಕ್ರಮ್ ಖಾನ್ ಪಠಾಣ್ (+ 80 ಕೆಜಿ)ಯಲ್ಲಿ ಭಾರತಕ್ಕೆ ಎರಡು ಕಂಚಿನ ಪದಕಗಳನ್ನು ಜಯಿಸಿಕೊಟ್ಟರು.
ಭಾರತದಿಂದ, 13 ಬಾಕ್ಸರ್ಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಇವರಲ್ಲಿ 12 ಮಂದಿ ಪದಕ ಜಯಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ 20 ದೇಶಗಳ 160 ಬಾಕ್ಸರ್ಗಳು ಭಾಗವಹಿಸಿದ್ದರು.
A stellar performance by Junior 🇮🇳boxers in Serbia!🥊💪
Indian pugilists finished “3rd Nation’s Cup” at Vrbas, Serbia with 1⃣2⃣ medals.
4 🥇
4 🥈
4 🥉
The Indian team is also adjudged the second-best team among the 22 participating teams. 👏👏👏#PunchMeinHaiDum #boxing pic.twitter.com/0SUJ79BqrP— Boxing Federation (@BFI_official) August 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.