ನವದೆಹಲಿ: ಶ್ರೇಣಿಯನ್ನು ಪರಿಗಣಿಸದೆ ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ನಿವೃತ್ತಿ ವಯಸ್ಸನ್ನು ಗೃಹ ವ್ಯವಹಾರ ಸಚಿವಾಲಯ ಸೋಮವಾರ 60 ವರ್ಷಕ್ಕೆ ನಿಗದಿಪಡಿಸಿದೆ.
ಗೃಹ ಸಚಿವಾಲಯದ ಆದೇಶದ ಪ್ರಕಾರ, ನಿವೃತ್ತಿ ವಯಸ್ಸು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್ಎಫ್), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಸಶಸ್ತ್ರ ಸೀಮಾ ಬಾಲ್ (ಎಸ್ಎಸ್ಬಿ) ಮತ್ತು ಅಸ್ಸಾಂ ರೈಫಲ್ಸ್ (ಎಆರ್) ನ ಅರೆಸೈನಿಕ ಘಟಕದ ನಿಯಮಿತ ಕೇಡರ್ಗಳ ಎಲ್ಲಾ ಶ್ರೇಣಿಯ ಸಿಬ್ಬಂದಿಗಳಿಗೂ ಪರಿಷ್ಕೃತ ನಿವೃತ್ತಿ ವಯಸ್ಸು ಅನ್ವಯವಾಗಲಿದೆ.
ಸಿಎಪಿಎಫ್ಗಳ ಎಲ್ಲಾ ಸದಸ್ಯರಿಗೆ ಏಕರೂಪವಾಗಿರುವ ನಿವೃತ್ತಿ ವಯಸ್ಸನ್ನು ನಿಗದಿಪಡಿಸುವಂತೆ ಸಚಿವಾಲಯಕ್ಕೆ 2019 ರ ಜನವರಿಯಲ್ಲಿ ದೆಹಲಿ ಹೈಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲಿ, ನಿವೃತ್ತಿ ವಯಸ್ಸನ್ನು 60ಕ್ಕೆ ನಿಗದಿಪಡಿಸಲಾಗಿದೆ.
ನಿವೃತ್ತಿ ವಯಸ್ಸು ಆದೇಶ ಇಂದಿನಿಂದಲೇ ಅನುಷ್ಠಾನಕ್ಕೆ ಬರಲಿದೆ.
ಡೆಪ್ಯೂಟಿ ಕಮಾಂಡೆಂಟ್ (ಐಟಿಬಿಪಿ) ದೇವ್ ಶರ್ಮಾ ಮತ್ತು ಭಾರತ ಸರ್ಕಾರದ ನಡುವಿನ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ನೀಡಿದ ಆದೇಶದ ಹಿನ್ನಲೆಯಲ್ಲಿ ನಿವೃತ್ತಿಯ ವಯಸ್ಸನ್ನು ಗೃಹಸಚಿವಾಲಯ ನಿಗದಿಪಡಿಸಬೇಕಾಗಿತ್ತು. ಈ ಆದೇಶ ಎಲ್ಲಾ ಸಿಎಪಿಎಫ್ಗಳಿಗೆ ಸಮಾನವಾಗಿದೆ.
ದೆಹಲಿ ಹೈಕೋರ್ಟ್ ತೀರ್ಪನ್ನು ಗೃಹ ಸಚಿವಾಲಯವು ಮೇ 10 ರಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು ಆದರೆ ಅದನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
“ಶ್ರೇಣಿಯನ್ನು ಲೆಕ್ಕಿಸದೆ” ಅರೆಸೈನಿಕ ಘಟಕದ ಸಾಮಾನ್ಯ ಕೇಡರ್ನಲ್ಲಿ ನಿವೃತ್ತಿಯ ವಯಸ್ಸು 60 ವರ್ಷಗಳು ಎಂದು ಸೋಮವಾರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.