ದುಮ್ಕಾ: ಪ್ರೀತಿಸಿದವರು ಸಿಕ್ಕಲಿಲ್ಲ, ಸಾಲ ಭಾದೆ ತಾಳಲಾರದೆ, ಪರೀಕ್ಷೆಯಲ್ಲಿ ಫೇಲ್ ಆದೆ ಎಂಬಿತ್ಯಾದಿ ಅನೇಕ ಕಾರಣಕ್ಕಾಗಿ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಇಲ್ಲೊಬ್ಬ ಹೆಣ್ಣಮಗಳು ಮನೆಯವರು ಶೌಚಾಲಯ ಕಟ್ಟಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜಾರ್ಖಾಂಡ್ನ ದುಮ್ಕಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶೌಚಾಲಯ ಕಟ್ಟಿಸಿ ಎಂದು ಯುವತಿ ತನ್ನ ಮನೆಯವರಿಗೆ ಪದೇ ಪದೇ ಮನವಿ ಮಾಡುತ್ತಲೇ ಇದ್ದಳು. ಆದರೆ ಆಕೆಯ ಮದುವೆಗೆ ಹಣ ಕೂಡಿಡಲು ಮುಂದಾಗಿದ್ದ ಮನೆಯವರು ಶೌಚಾಲಯ ನಿರ್ಮಿಸಲು ಒಪ್ಪಲೇ ಇಲ್ಲ.
ಆದರೆ ಬಯಲು ಶೌಚ ಮಾಡುವುದರಿಂದ ಅವಮಾನಗೊಂಡ ಆ ಯುವತಿ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಗ್ರಾಮೀಣ ಭಾಗದ ಜನರು ಇನ್ನೂ ಶೌಚಾಲಯದ ಮಹತ್ವವನ್ನು ಅರಿತುಕೊಳ್ಳದೆ ತಮ್ಮ ಹೆಣ್ಣುಮಕ್ಕಳ ಘನತೆಗೆ ಕುಂದುಂಟು ಮಾಡುತ್ತಿದ್ದಾರೆ. ಹೆಣ್ಣುಮಕ್ಕಳು ಈ ಬಗ್ಗೆ ಮನೆಯವರಿಗೆ ಮನವರಿಕೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಆದರೆ ಈ ಯುವತಿ ದುಡುಕಿನ ನಿರ್ಧಾರಕ್ಕೆ ಬಂದು ಪ್ರಾಣ ಕಳೆದುಕೊಂಡಿದ್ದು, ವಿಪರ್ಯಾಸವೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.