ಲಡಾಖ್: ಇತ್ತೀಚೆಗೆ ನೀಡಲಾದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದಿಂದ ಉತ್ತೇಜಿತಗೊಂಡಿರುವ ಲಡಾಖ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶೇಷ ಆತಿಥ್ಯವನ್ನು ವಹಿಸಲು ಯೋಜಿಸುತ್ತಿದೆ. ಇವರಿಬ್ಬರ ಜೋಡಿಯು ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಡಾಖ್ ಸಂಸದ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಅವರು, “ನಾವು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಲಡಾಖ್ಗೆ ಪ್ರತ್ಯೇಕ ಸ್ಥಾನಮಾನವನ್ನು ಕಲ್ಪಿಸುವುದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಆಹ್ವಾನವನ್ನು ನೀಡುತ್ತೇವೆ” ಎಂದು ಹೇಳಿದರು.
ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ದೃಢೀಕರಣದ ನಂತರವೇ ದಿನಾಂಕಗಳನ್ನು ಅಂತಿಮಗೊಳಿಸಲಾಗುತ್ತದೆ.
“ನಾವು ಈ ಕ್ಷಣಕ್ಕಾಗಿ 70 ವರ್ಷಗಳನ್ನು ಕಾಯುತ್ತಿದ್ದೆವು. ಈಗ ನಾವು ಅವರಿಗಾಗಿ ಒಂದು ದೊಡ್ಡ ಆಚರಣೆಯನ್ನು ಆಯೋಜಿಸಲು ಯೋಜಿಸುತ್ತಿದ್ದೇವೆ. ಪ್ರಧಾನಿ ಮತ್ತು ಗೃಹ ಸಚಿವರು ನಮಗೆ ದಿನಾಂಕಗಳನ್ನು ನೀಡಲಿ ಎಂದು ಕಾಯುತ್ತಿದ್ದೇವೆ” ಎಂದು ನಂಗ್ಯಾಲ್ ಹೇಳಿದ್ದಾರೆ.
ಲಡಾಖಿನ ವಿವಿಧ ಸಮುದಾಯಗಳನ್ನು ತಲುಪುವಂತೆ ಮತ್ತು ಹೂಡಿಕೆದಾರರಿಗೆ ಈ ಪ್ರದೇಶವನ್ನು ತೆರೆಯುವ ಬಗ್ಗೆ ಜನರಲ್ಲಿ ಇರುವ ಆತಂಕಗಳನ್ನು ದೂರಪಡಿಸುವಂತೆ ನಂಗ್ಯಾಲ್ ಅವರಿಗೆ ಬಿಜೆಪಿ ಜವಾಬ್ದಾರಿಯನ್ನು ವಹಿಸಿದೆ. ಇದಕ್ಕೆ ಅನುಸಾರವಾಗಿ ನಂಗ್ಯಾಲ್ ಅವರು ಲಡಾಖಿನ ವಿವಿಧ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದಾರೆ ಮತ್ತು ವಿವಿಧ ಸಮುದಾಯಗಳ ನಾಯಕರ ಅನುಮಾನಗಳಿಗೆ, ಅವರ ಭವಿಷ್ಯದ ಬಗೆಗಿನ ಚಿಂತೆಗಳಿಗೆ ಸೂಕ್ತ ಉತ್ತರ ಮತ್ತು ಭರವಸೆಗಳನ್ನು ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.