News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗ್ರೀಕ್ ಸರ್ಕಾರದ ವಿರುದ್ಧ ಪ್ರತಿಭಟನೆ

greece

ಅಥೆನ್ಸ್: ಹಲವಾರು ವರ್ಷಗಳಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ನಿಂದ ಎರವಲು ಹಣ ಪಡೆಯುತ್ತಿದ್ದ ಗ್ರೀಸ್, ಈಗ ಅದನ್ನು ಮರುಪಾವತಿ ಮಾಡಲು ವಿಫಲಗೊಂಡಿರುವುದು ಯುರೋಪ್‌ನ ಘೋರ ದುರಂತವೇ ಆಗಿದೆ.

ಯೂರೋಝಾನ್ ಜೊತೆ ಮುಂದುವರೆಯಬೇಕೆ ಬೇಡವೇ ಎಂಬ ಕುರಿತು ಅಲ್ಲಿನ ಸರ್ಕಾರ ಭಾನುವಾರ ಜನಮತ ಪಡೆಯುವ ಮುನ್ನವೇ ಅಲ್ಲಿಯ ಜನತೆ ಎಸ್, ನೋ ಎಂಬ ಬ್ಯಾನರ್ ಹಿಡಿದು ವಿಭಜನೆಗೊಂಡು ಪ್ರತಿಭಟನೆ ನಡೆಸಿದೆ. ಯೂರೋಝಾನ್ ಜೊತೆ ಸಂಬಂಧ ಮುಂದುವರೆಸುವ ಪರ ಮತ್ತು ಅದರ ವಿರುದ್ಧ ಅಥೆನ್ಸ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ 20 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡರು.

ಪ್ರತಿಭಟನಾಕಾರರು ಕಲ್ಲು ತೂರಾಟವನ್ನೂ ನಡೆಸಿದರು, ಇದರಿಂದ ಇವರ ಮತ್ತು ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು, ಪ್ರತಿಭಟನಾಕಾರರನ್ನು ತಡೆಯಲು ಪೆಪ್ಪರ್ ಸ್ಪ್ರೇ ಬಳಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top