ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ಇಹಲೋಕವನ್ನು ತ್ಯಜಿಸಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಮಂದಿ ಗಣ್ಯರು ವಾಜಪೇಯಿ ಅವರ ರಾಜ್ಘಾಟ್ನಲ್ಲಿರುವ ಸಮಾಧಿ ‘ಸದೈವ ಅಟಲ್’ಗೆ ತೆರಳಿ ಗೌರವ ನಮನಗಳನ್ನು ಸಲ್ಲಿಕೆ ಮಾಡಿದರು.
ವಾಜಪೇಯಿ ಅವರ ಪುಣ್ಯತಿಥಿಯಂದು ಬಿಜೆಪಿ ಕುಟುಂಬದ ಪ್ರತಿಯೊಬ್ಬರೂ ಅವರಿಗೆ ಗೌರವಾರ್ಪಣೆಗಳನ್ನು ಮಾಡಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರು ಪಕ್ಷದ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ.
“ಪ್ರತಿ ಜಿಲ್ಲೆಯಲ್ಲೂ ವಾಜಪೇಯಿ ಅವರಿಗೆ ಬಿಜೆಪಿ ನಾಯಕರು, ರಾಜ್ಯ ಘಟಕದ ಸದಸ್ಯರುಗಳು ಗೌರವ ಸಲ್ಲಿಸಬೇಕು ಎಂದು ನಾವು ಕೇಳಿಕೊಂಡಿದ್ದೇವೆ. ಆ ಮಹಾನ್ ನಾಯಕನ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸಲ್ಲಿಸಬೇಕಾದ ಗೌರವವನ್ನು ಸಮರ್ಪಿಸಬೇಕಿದೆ” ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಬಿಜೆಪಿಯ ಹಲವು ಘಟಕಗಳು ಸ್ವತಂತ್ರವಾಗಿಯೇ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಚರಣೆ ಮಾಡಲಿದೆ. ವಾಜಪೇಯಿ ಅವರನ್ನು ಸ್ಮರಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಿವೆ ಎಂದಿದ್ದಾರೆ.
ವಾಜಪೇಯಿ ಅವರು 2018ರ ಆಗಸ್ಟ್ 16ರಂದು ಇಹಲೋಕವನ್ನು ತ್ಯಜಿಸಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರ ಚಿತಾಭಸ್ಮವನ್ನು ಬಿಜೆಪಿ ದೇಶದ ಎಲ್ಲಾ ನದಿಗಳಲ್ಲೂ ವಿಸರ್ಜನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.