ನವದೆಹಲಿ: ಮಾನವೀಯತೆಯ ಹಬ್ಬವಾಗಿ ಆಚರಿಸಲಾಗುವ ಏಕೈಕ ಹಬ್ಬವೆಂದರೆ ರಕ್ಷಾಬಂಧನ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಮತ್ತು ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ಎಂ) ಮಾರ್ಗದರ್ಶಿ ಇಂದ್ರೇಶ್ ಕುಮಾರ್ ಅವರು ಹೇಳಿದ್ದಾರೆ.
ನವದೆಹಲಿಯ ಜಂತರ್ ಮಂತರ್ನ ಎನ್ಡಿಎಂಸಿ ಕನ್ವೆನ್ಷನ್ ಸೆಂಟರ್ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್, ಭಾರತ್-ಟಿಬೆಟ್ ಸಹಯೋಗ ಮಂಚ್, ರಾಷ್ಟ್ರೀಯ ಭದ್ರತೆಯ ಜಾಗೃತಿ ವೇದಿಕೆ, ಹಿಮಾಲಯ ಪರಿವಾರ್, ಧರ್ಮ ಸಂಸ್ಕೃತ ಸಂಗಮೆ ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ್ದ ಅಂತಾರಾಷ್ಟ್ರೀಯ ರಕ್ಷಾಬಂಧನ ಹಬ್ಬದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂಘಟನೆಗಳ ಮುಖಂಡರು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧರು, ಸಿಖ್, ಜೈನ್ ಮುಂತಾದ ಧಾರ್ಮಿಕ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ರಕ್ಷಾಬಂಧನವನ್ನು ಆಚರಿಸುವ ಸಂಪ್ರದಾಯವನ್ನು ಏಳು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು ಎಂದು ನೆನಪಿಸಿಕೊಂಡ ಇಂದ್ರೇಶ್ ಕುಮಾರ್, ಎಲ್ಲಾ ವರ್ಣಗಳ ಜನರಲ್ಲಿ ದ್ವೇಷ ಮತ್ತು ಕೆಟ್ಟ ಭಾವನೆಗಳನ್ನು ನಿರ್ಮೂಲನೆ ಮಾಡಲು ಇದು ಅಗತ್ಯವಾಗಿದೆ ಎಂದು ಹೇಳಿದರು. ವಿಶೇಷವಾಗಿ ಕೆಲವು ನಾಯಕರು ಸಮಾಜವನ್ನು ಜಾತಿ, ಧರ್ಮ, ಭಾಷೆ ಮತ್ತು ರಾಜಕೀಯದ ಹೆಸರಿನಲ್ಲಿ ವಿಭಜಿಸಲು ಪ್ರಯತ್ನಿಸುತ್ತಿರುವಾಗ ರಕ್ಷಾಬಂಧನದ ಹಬ್ಬ ಪ್ರಮುಖವಾಗುತ್ತದೆ ಎಂದರು. ಕಾಂಗ್ರೆಸ್ ಪಕ್ಷವು ಇಂತಹ ವಿಭಜನಾ ಕಾರ್ಯಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಗಿಡಗಳನ್ನು ನೆಡಲು, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಮತ್ತು ಸುಂದರ ವಾತಾವರಣದಲ್ಲಿ ವಾಸಿಸಲು ಈ ವೇಳೆ ಅವರು ಜನರಿಗೆ ಕರೆ ನೀಡಿದರು.
ಜಾತಿ, ಭಾಷೆ, ಪಂಥ ಮತ್ತು ಭೌಗೋಳಿಕ ಭಿನ್ನತೆಗಳಿಗಿಂತ ಮೇಲಿರುವ ಮಾನವೀಯತೆಯ ಈ ಸುಂದರ ಕೂಟವು ಭಾರತೀಯತೆಯನ್ನು ಬಲಪಡಿಸಿದೆ ಎಂದು ಅವರು ಬಣ್ಣಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.