ನವದೆಹಲಿ: ಭಾರತದ ಪ್ರಾಜಾಪ್ರಭುತ್ವದ ದೊಡ್ಡ ಹಬ್ಬ ಎಂದೇ ಪರಿಗಣಿತವಾದ ಸಾರ್ವತ್ರಿಕ ಚುನಾವಣೆ, ಲೋಕಸಭಾ ಚುನಾವಣೆ 2019 ರ ಸಂಪೂರ್ಣ ವಿವರಗಳನ್ನು ಆಧರಿಸಿದ ಸಾಕ್ಷ್ಯಚಿತ್ರವು ಆಗಸ್ಟ್ 15 ರಂದು ನ್ಯಾಷನಲ್ ಜಿಯೋಗ್ರಫಿಯಲ್ಲಿ ಪ್ರಸಾರಗೊಳ್ಳಲಿದೆ.
ದೇಶದಾದ್ಯಂತ 37 ಸ್ಥಳಗಳಲ್ಲಿ ಚಿತ್ರೀಕರಿಸಲಾದ ಸಾಕ್ಷ್ಯಚಿತ್ರ ಇದಾಗಿದ್ದು, ಚುನಾವಣೆಯ ಹಲವಾರು ಅಂಶಗಳನ್ನು ಇದರಲ್ಲಿ ಸೆರೆಹಿಡಿಯಲಾಗಿದೆ. ಹಲವಾರು ಬೂತ್ ಮಟ್ಟದ ಅಧಿಕಾರಿಗಳು, ರಾಜಕೀಯ ಮುಖಂಡರುಗಳು ಮತ್ತು ತಳಮಟ್ಟದ ಪಕ್ಷದ ಕಾರ್ಯಕರ್ತರು, ಮೊದಲ ಬಾರಿಯ ಮತದಾರರು ಮತ್ತು 100 ವರ್ಷ ವಯಸ್ಸಿನ ಮತದಾರರು ಚುನಾವಣೆಯ ಬಗ್ಗೆ ನೀಡಿರುವ ಹೇಳಿಕೆಗಳನ್ನು ಇದು ಒಳಗೊಂಡಿದೆ.
ದೆಹಲಿಯ ಚುನಾವಣಾ ಆಯೋಗದ ಕಚೇರಿಗಳು, ಭಾರತ-ಚೀನಾ ಗಡಿಯಲ್ಲಿರುವ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿರುವ ಮತ್ತು ಛತ್ತೀಸ್ಗಢದ ಪ್ರದೇಶಗಳಲ್ಲಿ ಇರುವ ಚುನಾವಣಾ ಆಯೋಗದ ಕಛೇರಿಗಳ ಮಾಹಿತಿಯನ್ನೂ ಈ ಸಾಕ್ಷ್ಯಚಿತ್ರವು ಆಧರಿಸಿದೆ.
ರಾಜಕೀಯ ಪಕ್ಷಗಳು, ಮತದಾರರ ವರ್ತನೆ, ರಾಜಕೀಯ ಸಮಾವೇಶಗಳು, ಸಾಮಾಜಿಕ ಮಾಧ್ಯಮದ ಪಾತ್ರ ಮತ್ತು ಮತದಾರರನ್ನು ಸೆಳೆಯುವಲ್ಲಿ ಹೊಸ ತಂತ್ರಜ್ಞಾನಗಳ ಬಳಸಿಕೊಳ್ಳುವಿಕೆ ಹೀಗೆ ಎಲ್ಲವನ್ನೂ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ.
“ಜಗತ್ತಿಗೆ ಪ್ರಸ್ತುತವಾದ ಪ್ರಜಾಪ್ರಭುತ್ವದ ಕಥೆಯನ್ನು ಹೇಳಲು ನಾವು ಉತ್ಸುಕರಾಗಿದ್ದೇವೆ. ಮೊದಲ ಬಾರಿಗೆ ವೀಕ್ಷಕರು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಸಂಕೀರ್ಣತೆ ಮತ್ತು ವಿಶಾಲತೆಯನ್ನು ಅರ್ಥಮಾಡಿಕೊಳ್ಳಲಿದ್ದಾರೆ. ಪ್ರತಿಯೊಬ್ಬ ಭಾರತೀಯನು ಈ ಅಮೋಘ ಪ್ರಯಾಣದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತಾನೆ” ಎಂದು ಸ್ಟಾರ್ ಇಂಡಿಯಾದ ಗಾಯತ್ರಿ ಯಾದವ್ ಹೇಳಿದ್ದಾರೆ.
ಸಾಕ್ಷ್ಯಚಿತ್ರವು ಆಗಸ್ಟ್ 15 ರಂದು ಮಧ್ಯಾಹ್ನ 1 ಗಂಟೆಗೆ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ನಲ್ಲಿ ಪ್ರಥಮವಾಗಿ ಪ್ರದರ್ಶನಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.