ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಮುಸ್ಲಿಂ ಮಹಿಳಾ ಪ್ರತಿಷ್ಠಾನದ ಸದಸ್ಯರು ತಮ್ಮ ಸಹೋದರ ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ಷಾಬಂಧನ ಹಬ್ಬದ ಪ್ರಯುಕ್ತ ರಕ್ಷೆಯನ್ನು ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ವಿಶೇಷ ರಾಖಿಗಳನ್ನು ಸಿದ್ಧಪಡಿಸಿದ್ದಾರೆ. ತ್ರಿವಳಿ ತಲಾಖ್ ಎಂಬ ದುಷ್ಟ ಪದ್ಧತಿಯಿಂದ ತಮ್ಮನ್ನು ರಕ್ಷಣೆ ಮಾಡಿದ್ದಕ್ಕಾಗಿ ವಿಧೇಯತೆಯನ್ನು ತೋರಿ ರಕ್ಷೆಯನ್ನು ಕಳುಹಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರು ವಾರಣಾಸಿ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದಾರೆ. ತ್ರಿವಳಿ ತಲಾಖ್ ಅನಿಷ್ಟದಿಂದ ಸ್ವಾತಂತ್ರ್ಯ ಪಡೆದ ಕಾರಣಕ್ಕೆ ಮುಸ್ಲಿಂ ಮಹಿಳೆಯರು ಮೋದಿ ಅವರ ಚಿತ್ರವುಳ್ಳ ರಾಖಿಗಳನ್ನು ತಮ್ಮ ಕೈಯಾರೆ ಸಿದ್ಧಪಡಿಸಿದ್ದಾರೆ ಮತ್ತು ಅದನ್ನು ಪ್ರಧಾನಿ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಸ್ಲಿಂ ಮಹಿಳಾ ಪ್ರತಿಷ್ಠಾನದ ಸದಸ್ಯರಲ್ಲೊಬ್ಬರಾದ ನಜೀಮಾ ಅನ್ಸಾರಿ ಅವರು ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದು, “ನಮ್ಮ ಪ್ರತಿಷ್ಠಾನದ ಬನಾರಸ್ನಲ್ಲಿ ವಾಸಿಸುವ ಮುಸ್ಲಿಂ ಮಹಿಳೆಯರು ಮೊದಲ ಬಾರಿಗೆ 2013 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿಯನ್ನು ಕಳುಹಿಸಿದ್ದರು. ಅಂದಿನಿಂದ, ಈ ಆಚರಣೆ ಮುಂದುವರೆದಿದೆ” ಎಂದಿದ್ದಾರೆ.
“ನಮ್ಮ ಪ್ರತಿಷ್ಠಾನದ ಮಹಿಳೆಯರು ಪ್ರಧಾನಿ ಮೋದಿಯವರನ್ನು ಹಿರಿಯ ಸಹೋದರ ಮತ್ತು ತಂದೆಯ ಸ್ಥಾನದಲ್ಲಿರುವ ವ್ಯಕ್ತಿ ಎಂದು ಪರಿಗಣಿಸುತ್ತಾರೆ. ಆದ್ದರಿಂದ, ಪ್ರತಿ ವರ್ಷದಂತೆ, ಈ ವರ್ಷವೂ ನಾವು ಅವರಿಗೆ ರಾಖಿಯನ್ನು ಕಳುಹಿಸುತ್ತಿದ್ದೇವೆ, ಅವರು ನಮ್ಮನ್ನು ರಕ್ಷಣೆ ಮಾಡುವುದನ್ನು ಮುಂದುವರೆಸಲಿದ್ದಾರೆ ಮತ್ತು ಅಗತ್ಯವಿರುವ ಸಮಯದಲ್ಲಿ ನಮಗೆ ಸಹಾಯ ಮಾಡುತ್ತಾರೆ ಎಂಬ ಭರವಸೆ ಇದೆ ”ಎಂದು ನಜೀಮಾ ಹೇಳುತ್ತಾರೆ.
ಮುಸ್ಲಿಂ ಮಹಿಳೆಯರ ಜೀವನವನ್ನು ಪರಿವರ್ತಿಸಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳಿಂದ ಸಂತೋಷಗೊಂಡ ರಾಂಪುರದ ಹುಮಾ ಬಾನೊ ಎಂಬ ಮತ್ತೊಬ್ಬ ಮಹಿಳೆ ಮಾತನಾಡಿ, “ಮೋದಿ ಅವರ ಕಾರಣದಿಂದಾಗಿ ತ್ರಿವಳಿ ತಲಾಖ್ ಅನ್ನು ಅಪರಾಧೀಕರಿಸಲಾಗಿದೆ. ಅವರು ದೇಶದ ಎಲ್ಲಾ ಮುಸ್ಲಿಂ ಮಹಿಳೆಯರ ಹಿರಿಯ ಸಹೋದರನಿದ್ದಂತೆ. ನಮ್ಮ ಸಹೋದರನಿಗಾಗಿ ನಾವು ರಾಖಿಗಳನ್ನು ತಯಾರು ಮಾಡಿದ್ದೇವೆ” ಎಂದಿದ್ದಾರೆ.
ಮೋದಿ ಸರ್ಕಾರವು ಲಿಂಗ ಸಮಾನತೆಯನ್ನು ಸ್ಥಾಪಿಸುವುದಲ್ಲದೇ, ಮುಸ್ಲಿಂ ಮಹಿಳೆಯರಿಗೆ ಗೌರವ ಮತ್ತು ಘನತೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತಿದೆ. ಮೋದಿ ಸರ್ಕಾರ ತಲಾಖ್ ಮಸೂದೆಯನ್ನು ಅಂಗೀಕರಿಸುವ ಮೂಲಕ ಅದನ್ನು ಅಪರಾಧೀಕರಣಗೊಳಿಸಿದೆ. ಈ ಅಪರಾಧವನ್ನು ಎಸಗುವವರಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.