ಲಕ್ನೋ: ತಮ್ಮ ರಾಜ್ಯದ ಸಹೋದರಿಯರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಕ್ಷಾಬಂಧನವ ಉಡುಗೊರೆಯನ್ನು ಘೋಷಣೆ ಮಾಡಿದ್ದಾರೆ. ಮಹಿಳೆಯರಿಗೆ ಎಲ್ಲಾ ವಿಭಾಗದ ಬಸ್ಗಳಲ್ಲೂ ರಕ್ಷಾಬಂಧನದಂದು ಉಚಿತ ಸಾರಿಗೆ ಸೌಲಭ್ಯವನ್ನು ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ.
“ರಕ್ಷಾ ಬಂಧನ ಅತ್ಯಂತ ಶುಭದಾಯಕ ಹಬ್ಬ. ಈ ರಾಜ್ಯದ ನಾಗರಿಕರಿಗೆ ರಕ್ಷಾ ಬಂಧನ ಸಂತೋಷ ತರಲೆಂದು ನಾನು ಬಯಸುತ್ತೇನೆ. ಈ ಶುಭ ಪಾವನ ಸಂದರ್ಭದಲ್ಲಿ, ಮಹಿಳೆಯರಿಗೆ ಉಚಿತ ಸಾರಿಗೆಯನ್ನು ನೀಡುವಂತೆ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಯುಪಿಎಸ್ಆರ್ಟಿಸಿ) ಸರ್ಕಾರದ ವತಿಯಿಂದ ನಿರ್ದೇಶನ ನೀಡಲಾಗಿದೆ. ಎಲ್ಲಾ ವರ್ಗದ ಬಸ್ಗಳಲ್ಲೂ ರಕ್ಷಾಬಂಧನದ ದಿನದಂದು ಮಹಿಳೆಯರಿಗೆ ಪ್ರಯಾಣ ಉಚಿತವಿರಲಿದೆ” ಎಂದು ಯೋಗಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
“ಆಗಸ್ಟ್ 14 ರ ಮಧ್ಯರಾತ್ರಿಯಿಂದ ಆಗಸ್ಟ್ 15 ರ ಮಧ್ಯರಾತ್ರಿಯವರೆಗೆ 24 ಗಂಟೆಗಳ ಕಾಲ ಉಚಿತ ಸಾರಿಗೆ ಸೇವೆ ಪರಿಣಾಮಕಾರಿಯಾಗಿ ಜಾರಿಯಾಗಲಿದೆ. ಉಚಿತ ಪ್ರಯಾಣದ ಸಮಯದಲ್ಲಿ ರಾಜ್ಯದ ಮಹಿಳೆಯರಿಗೆ ಬಸ್ಗಳಲ್ಲಿ ಸಾಕಷ್ಟು ಭದ್ರತೆ ನೀಡಲಾಗುವುದು. ಉತ್ತರಪ್ರದೇಶ ಸರ್ಕಾರವು ಎಲ್ಲಾ ಸಹೋದರಿಯರಿಗೆ ನೀಡುವ ಉಡುಗೊರೆ ಇದಾಗಿದೆ” ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿಯವರು ತಮ್ಮ ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ರಕ್ಷಾ ಬಂಧನದ ಶುಭ ಹಾರೈಕೆಯನ್ನು ತಿಳಿಸಿದ್ದಾರೆ.
रक्षा बंधन के लिए मुख्यमंत्री श्री @myogiadityanath जी ने प्रदेश की सभी बहनों बेटियों को अपनी शुभकामनाएं दीं और प्रदेश की सभी माताओं-बहनों को
रक्षाबंधन के पावन पर्व पर सुरक्षित एवं मुफ्त यातायात का तोहफा दिया।15 अगस्त को परिवहन निगम की बसों में महिलाएं निःशुल्क यात्रा कर सकेंगी। pic.twitter.com/jP8BKnSnFH— Yogi Adityanath Office (@myogioffice) August 10, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.