ನವದೆಹಲಿ: ವೇತನ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಸಂಸದರ ಆಸೆಗೆ ತಣ್ಣೀರು ಬಿದ್ದಿದೆ, ವೇತನ ಹೆಚ್ಚಿಸುವಂತೆ ಸಂಸದೀಯ ಸಮಿತಿ ಮಾಡಿರುವ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಸಂಸದೀಯ ಸಮಿತಿ ಸಂಸದರ ದೈನಂದಿನ ಭತ್ಯೆಯನ್ನು ಶೇ.100ರಷ್ಟು ಹೆಚ್ಚಿಸುವಂತೆ ಜೂನ್ 25ರಂದು ಶಿಫಾರಸ್ಸು ಮಾಡಿತ್ತು, ಆದರೆ ಇದನ್ನು ಕೇಂದ್ರ ತಳ್ಳಿ ಹಾಕಿದೆ.
ಈಗಾಗಲೇ ಸಂಸದರು 50 ಸಾವಿರ ವೇತನವನ್ನು ಪಡೆಯುತ್ತಿದ್ದಾರೆ, ಈ ನಡುವೆ ಭತ್ಯೆಗಳು ಸೇರಿ ಅವರ ವೇತನ ಲಕ್ಷವನ್ನೂ ದಾಟುತ್ತದೆ. ಹೀಗಿರುವ ಇವರ ವೇತನವನ್ನು ಮತ್ತಷ್ಟು ಹೆಚ್ಚಿಸುವುದು ಸರಿಯಲ್ಲ.
ಜನಸಾಮಾನ್ಯರ ಕಷ್ಟಕಾರ್ಪಣ್ಯಗಳನ್ನು ಅರಿತು ಸರ್ಕಾರ ಹೆಜ್ಜೆಯಿಟ್ಟಿದೆ, ಜನರ ಹಣವನ್ನು ಸಂಸದರ ದುಂದುವೆಚ್ಚಕ್ಕೆ ವ್ಯಯ ಮಾಡುವ ಬದಲು ಜನರ ಜೀವನಮಟ್ಟವನ್ನು ವೃದ್ಧಿಸುತ್ತ ಗಮನ ಹರಿಸಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.