ನವದೆಹಲಿ: ಸಮಾಜವಾದಿ ಪಕ್ಷಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ, ಈ ತಿಂಗಳ ಆರಂಭದಲ್ಲಿ ರಾಜ್ಯಸಭೆ ಸದಸ್ಯತ್ವಕ್ಕೆ ಮತ್ತು ಆ ಪಕ್ಷಕ್ಕೆ ರಾಜೀನಾಮೆ ನೀಡಿರುವ ಅದರ ಮಾಜಿ ಸಂಸದರಾದ ಸಂಜಯ್ ಸೇಠ್ ಮತ್ತು ಸುರೇಂದ್ರ ನಗರ್ ಅವರು ಶನಿವಾರ ಬಿಜೆಪಿಗೆ ಸೇರಿದ್ದಾರೆ. ಹಿರಿಯ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಅವರ ಸಮ್ಮುಖದಲ್ಲಿ ಇವರಿಬ್ಬರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ.
ಆಗಸ್ಟ್ 2 ರಂದು ಸೇಠ್ ಸಂಸದ ಮತ್ತು ಪಕ್ಷದ ಸ್ಥಾನದಿಂದ ಕೆಳಗಿಳಿದಿದ್ದರು, ನಗರ್ ಅವರು ಸಮಾಜವಾದಿ ಮತ್ತು ರಾಜ್ಯಸಭೆಗೆ ಆಗಸ್ಟ್ 5ರಂದು ರಾಜೀನಾಮೆ ನೀಡಿದ್ದರು.
“ನನಗೆ ಉತ್ತರ ಪ್ರದೇಶವನ್ನು ಪ್ರತಿನಿಧಿಸುವ ಸಂಜಯ್ ಸೇಠ್ ಮತ್ತು ಸುರೇಂದ್ರ ಸಿಂಗ್ ನಗರ್ ಅವರಿಂದ, ಅಸ್ಸಾಂ ರಾಜ್ಯವನ್ನು ಪ್ರತಿನಿಧಿಸುವ ಭುವನೇಶ್ವರ ಕಾಳಿತಾ ಅವರಿಂದ ರಾಜೀನಾಮೆ ಪತ್ರಗಳು ಬಂದಿವೆ. ರಾಜ್ಯಸಭೆಯ ಸ್ಥಾನಕ್ಕೆ ಅವರು ನೀಡಿರುವ ರಾಜೀನಾಮೆಯನ್ನು ತಕ್ಷಣಕ್ಕೆ ಜಾರಿ ಬರುವಂತೆ ಸ್ವೀಕರಿಸುತ್ತಿದ್ದೇನೆ” ಎಂದು ಈ ವಾರದ ಆರಂಭದಲ್ಲಿ ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಘೋಷಣೆ ಮಾಡಿದ್ದರು.
ಇದಕ್ಕೂ ಮೊದಲು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅವರು ಸಮಾಜವಾದಿಯನ್ನು ತೊರೆದು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದರು. ಮೂವರು ನಾಯಕರ ನಿರ್ಗಮನದೊಂದಿಗೆ, ಸಮಾಜವಾದಿ ಈಗ ಮೇಲ್ಮನೆಯಲ್ಲಿ ಕೇವಲ ಹತ್ತು ಸದಸ್ಯರನ್ನು ಮಾತ್ರ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.