ಶ್ರೀನಗರ: ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕವೂ ಕಣಿವೆ ರಾಜ್ಯ ಸುಸ್ಥಿತಿಯಲ್ಲಿ ಇದೆ. ಅಶಾಂತಿಗೆ ಭಂಗ ಬರುವಂತಹ ಯಾವುದೇ ಘಟನೆಗಳು ಅಲ್ಲಿ ನಡೆದಿಲ್ಲ. ಶುಕ್ರವಾರ ಸೆಕ್ಷನ್ 144 ಅನ್ನು ಕೂಡ ತೆರವುಗೊಳಿಸಲಾಗಿದೆ. ಶಾಲಾ-ಕಾಲೇಜುಗಳನ್ನು ಅಲ್ಲಿ ತೆರೆಯಲಾಗಿದ್ದು, ಶುಕ್ರವಾರ ಜನರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಮತ್ತು ಸರ್ಕಾರಿ ಅಧಿಕಾರಿಗಳು ಕಚೇರಿಗೆ ಆಗಮಿಸಿದ್ದಾರೆ.
ಸೆಕ್ಷನ್ 144 ಅನ್ನು ತೆರವುಗೊಳಿಸಿದ ಬಳಿಕವೂ ಯಾವುದೇ ಗಲಾಟೆ, ದೊಂಬಿಗಳು ಅಲ್ಲಿ ನಡೆದಿಲ್ಲ. ಹೀಗಾಗಿ ಕಣಿವೆ ರಾಜ್ಯವು ಮೊದಲಿಗಿಂತಲೂ ಈಗ ಶಾಂತಿಯುತವಾಗಿದೆ ಎಂಬುದು ತಿಳಿದು ಬರುತ್ತಿದೆ.
ಶುಕ್ರವಾರ ಮುಸ್ಲಿಮರಿಗೆ ಪವಿತ್ರ ದಿನವಾದ್ದರಿಂದ ನಮಾಜು ಮಾಡಲು ಅನುವು ಮಾಡಿಕೊಡುವ ಸಲುವಾಗಿ ಕೆಲವು ನಿಬಂಧನೆಗಳನ್ನು ಸಡಿಲಗೊಳಿಸಲಾಗಿತ್ತು. ಹೀಗಾಗಿ, ಶುಕ್ರವಾರ ಶ್ರೀನಗರವೊಂದರಲ್ಲೇ 18 ಸಾವಿರ ಮುಸ್ಲಿಮರು ನಮಾಜು ಮಾಡಿದ್ದಾರೆ. ಅಲ್ಲದೆ ಬುದ್ಗಾಮ್ ಜಿಲ್ಲೆಯಲ್ಲಿ 7,500, ಅನಂತನಾಗ್ ಜಿಲ್ಲೆಯಲ್ಲಿ 11 ಸಾವಿರ, ಶೋಪಿಯಾನ್’ನಲ್ಲಿ 4 ಸಾವಿರ ಮುಸ್ಲಿಮರು ಯಾವುದೇ ಅಡೆ ತಡೆಯಿಲ್ಲದೆ ನಮಾಜು ಮಾಡಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.
ಕಾಶ್ಮೀರದ ಬಹುತೇಕ ಕಡೆ ಶಾಂತಿ ಆವರಿಸಿದೆ. ಹಾಗಾಗಿ ಜನಜೀವನಕ್ಕೆ ಯಾವುದೇ ಅಡೆಚಣೆಯಾಗಿಲ್ಲ. ಅದರಲ್ಲೂ ಮುಸ್ಲಿಮರ ಪವಿತ್ರ ನಮಾಜಿಗೆ ಯಾವುದೇ ಅಡ್ಡಿ ಆತಂಕ ಎದುರಾಗಿಲ್ಲ. ಮುಸ್ಲಿಮರು ನಿರಾಳವಾಗಿ ಮಸೀದಿಗಳಿಗೆ ತೆರಳಿ ನಮಾಜು ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತ್ಯೇಕತಾವಾದಿಗಳು, ರಾಜಕೀಯ ಮುಖಂಡರುಗಳಿಗೆ ಹಾಕಿರುವ ನಿರ್ಬಂಧಗಳೂ ಕೂಡ ಕಣಿವೆ ಶಾಂತಿಯುತವಾಗಲು ಕಾರಣವಾಗಿದೆ. ಆದರೂ ಅಲ್ಲಿ ಸೈನಿಕರು ನಿರಂತರವಾದ ಕಣ್ಗಾವಲಿನಲ್ಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯಂದೆ ಎಚ್ಚರಿಕೆಯನ್ನು ವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.