ನವದೆಹಲಿ: ರಸ್ತೆಯ ಮೂಲೆ ಮೂಲೆಯಲ್ಲಿರುವ ಕಸವನ್ನು ತೆಗೆಯುವ ಮೂಲಕ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬರುತ್ತಿರುವ ಚಿಂದಿ ಆಯುವ ಮಂದಿಗೆ ಗೌರವ ನೀಡಲು ಸರ್ಕಾರ ಮುಂದಾಗಿದೆ.
ಚಿಂದಿ ಆಯುವ ಕಾಯಕ ಮಾಡುವ ಜನರನ್ನು ಗುರುತಿಸಿ, ಅದರಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಆಯ್ಕೆ ಮಾಡಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ತೆಗೆದುಕೊಂಡಿದೆ.
ದೇಶದಲ್ಲಿ ಲಕ್ಷಾಂತರ ಚಿಂದಿ ಆಯುವವರಿದ್ದಾರೆ. ಅನೌಪಚಾರಿಕ ವಲಯದಲ್ಲಿರುವ ಇವರು ತಮ್ಮ ಕಾರ್ಯದ ಮೂಲಕ ದೇಶವನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಇವರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ. ಹೀಗಾಗಿ ಇವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡುವ ನಿರ್ಧಾರವನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಪ್ರಶಸ್ತಿ 1.5 ಲಕ್ಷ ನಗದನ್ನು ಈ ರಾಷ್ಟ್ರೀಯ ಪ್ರಶಸ್ತಿ ಒಳಗೊಳ್ಳಲಿದ್ದು, ವರ್ಷದಲ್ಲಿ ಮೂವರಿಗೆ ಮತ್ತು ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿರುವ ಸಂಘಟನೆಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಚಿಂದಿ ಆಯುವವರನ್ನು ಸನ್ಮಾನಿಸಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಶ್ಲಾಘನಾರ್ಹ. ಈ ಮೂಲಕವಾದರೂ ಅವರಿಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಸಿಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.