ನವದೆಹಲಿ: ತಮ್ಮ ಎರಡನೆಯ ಅವಧಿಯ ಸರ್ಕಾರದ ಮೊದಲ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, 2022ರ ವೇಳೆಗೆ ಸರ್ವರಿಗೂ ವಸತಿಯನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂಬುದನ್ನು ಪುನರುಚ್ಚರಿಸಿದ್ದಾರೆ ಮತ್ತು ಈ ಗುರಿಯನ್ನು ತಲುಪುವಲ್ಲಿ ಇರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಪಿಎಂ ಆವಾಸ್ ಯೋಜನೆ (ನಗರ) ಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ ಮೋದಿ ಬುಧವಾರ ಪ್ರಗತಿ ಸಭೆ ನಡೆಸಿದರು. ಇದು ಮೋದಿಯ ಎರಡನೆಯ ಅವಧಿ ಸರ್ಕಾರದ ಮೊದಲ ‘ಪ್ರೋ ಆ್ಯಕ್ಟಿವ್ ಗವರ್ನೆನ್ಸ್ ಆ್ಯಂಡ್ ಟೈಮ್ಲಿ ಇಂಪ್ಲಿಮೆಂಟೇಶನ್ (ಪ್ರಗತಿ)’ ಸಭೆಯಾಗಿದೆ.
ನೀರಿನ ಸಂರಕ್ಷಣೆ, ಅದರಲ್ಲೂ ಪ್ರಮುಖವಾಗಿ ಮಳೆಗಾಲದಲ್ಲಿ ನೀರಿನ ಸಂರಕ್ಷಣೆ ಮಾಡುವತ್ತ ಹೆಚ್ಚಿನ ಪ್ರಯತ್ನಗಳನ್ನು ಹಾಕುವಂತೆ ಅವರು ಎಲ್ಲಾ ರಾಜ್ಯಗಳಿಗೆ ಕರೆ ನೀಡಿದ್ದಾರೆ.
ಹಿಂದಿನ ಅವಧಿಯ ಸರ್ಕಾರದಲ್ಲಿ ನಡೆದ ಇಂತಹ 29 ಸಭೆಗಳಲ್ಲಿ ಒಟ್ಟು 12 ಲಕ್ಷ ಕೋಟಿ ರೂ.ಗಳ ಹೂಡಿಕೆಯುಳ್ಳ 257 ಯೋಜನೆ ಪರಿಶೀಲನೆ ನಡೆದಿತ್ತು.
2022 ರ ವೇಳೆಗೆ ಪ್ರತಿ ಕುಟುಂಬವು ಮನೆಯನ್ನು ಹೊಂದುವಂತೆ ನೋಡಿಕೊಳ್ಳುವ ತನ್ನ ಸರ್ಕಾರದ ಸಂಕಲ್ಪವನ್ನು ಅವರು ಪುನರುಚ್ಛರಿಸಿದ್ದಾರೆ ಮತ್ತು ಈ ಉದ್ದೇಶದ ಕಡೆಗೆ ಶ್ರದ್ಧೆಯಿಂದ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಗುರಿ ತಲುಪುವಲ್ಲಿನ ದಾರಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವಂತೆ ಕರೆ ನೀಡಿದರು.
ಈ ನಿಟ್ಟಿನಲ್ಲಿ, ಹಣಕಾಸು ಸೇವೆಗಳ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳ ಪರಿಹಾರವನ್ನೂ ಮೋದಿ ಪರಿಶೀಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.