ಗುವಾಹಟಿ: ಅಸ್ಸಾಂನ 200 ವರ್ಷಗಳಷ್ಟು ಹಳೆಯ ಚಹಾ ಉದ್ಯಮವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ, ಇಂತಹ ಸಂದರ್ಭದಲ್ಲಿ ಅಲ್ಲಿನ ಮನೋಹರಿ ಟೀ ಎಸ್ಟೇಟ್ನ ವತಿಯಿಂದ ತಯಾರಿಸಿದ ಅಪರೂಪದ ಚಹಾವು ಕೆಜಿಗೆ ಬರೋಬ್ಬರಿ ರೂ.50 ಸಾವಿರಕ್ಕೆ ಹರಾಜಾಗಿದೆ. ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ (ಜಿಟಿಎಸಿ) ಮಂಗಳವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಚಹಾಕ್ಕೆ ದಾಖಲೆಯ ಮೊತ್ತ ಸಿಕ್ಕಿದೆ.
ಅಸ್ಸಾಂನ ಎಲ್ಲಾ ಮಾದರಿಯ ಚಹಾಗಳಿಗಿಂತಲೂ ಈ ಚಹಾ ಹರಾಜು ಪ್ರಕ್ರಿಯೆಯಲ್ಲಿ ಅತ್ಯಧಿಕ ಮೌಲ್ಯಕ್ಕೆ ಮಾರಾಟವಾಗಿದೆ ಎಂದು ಗುವಾಹಟಿ ಚಹಾ ಹರಾಜು ಕೇಂದ್ರ ದೃಢಪಡಿಸಿದೆ.
ಈ ಅಪರೂಪದ ಚಹಾವನ್ನು ಮನೋಹರಿ ಗೋಲ್ಡ್ ಟೀ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಇದನ್ನು ಚಹಾ ಎಲೆಗಳಿಂದ ಅಲ್ಲ, ಸಣ್ಣ ಮೊಗ್ಗುಗಳಿಂದ ತಯಾರಿಸಲಾಗುತ್ತದೆ. ಮನೋಹರಿ ಟೀ ಎಸ್ಟೇಟ್ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿಪಡಿಸಿದ ಚಹಾ ವಿಧಾನ ಇದಾಗಿದ್ದು, ಇದನ್ನು “ಅತ್ಯುತ್ತಮ ವೈವಿಧ್ಯತೆ”ಯ ಚಹಾ ಎಂದು ಬಣ್ಣಿಸಲಾಗಿದೆ.
ಕಳೆದ ವರ್ಷ ಈ ಚಹಾ ಪ್ರತಿ ಕಿಲೋಗ್ರಾಂಗೆ 39,001 ರೂಗೆ ಹರಾಜಾಗಿತ್ತು. ಆದರೆ ಅರುಣಾಚಲ ಪ್ರದೇಶದ ಡೊನಿ ಪೊಲೊ ಟೀ ಎಸ್ಟೇಟ್ನ ಗೋಲ್ಡನ್ ನೀಡಲ್ ಚಹಾ ಅತೀ ಹೆಚ್ಚು ರೂಪಾಯಿಗೆ ಮಾರಾಟವಾಗಿ ದಾಖಲೆ ಬರೆದಿತ್ತು. ಇದನ್ನು ಪ್ರತಿ ಕಿಲೋಗ್ರಾಂಗೆ 40,000 ರೂ.ಗೆ ಮಾರಾಟ ಮಾಡಲಾಗಿತ್ತು. ಆದರೆ ಈ ಬಾರಿ ಮನೋಹರಿ ಗೋಲ್ಡ್ ಟೀ ದಾಖಲೆಯನ್ನು ನಿರ್ಮಿಸಿದೆ.
ಮನೋಹರಿ ಟೀ ಎಸ್ಟೇಟ್ ಮಾಲೀಕ ರಾಜನ್ ಲೋಹಿಯಾ ಅವರು ಹೇಳುವಂತೆ, ಈ ವರ್ಷ ಈ ಚಹಾದ ಮೌಲ್ಯವನ್ನು ಹೆಚ್ಚಿಸಲು ಸಾಕಷ್ಟು ಪ್ರಯತ್ನಗಳನ್ನು ಅವರು ಮಾಡಿದ್ದಾರೆ. “ಚಹಾವನ್ನು ‘ಪಿ -126’ ಎಂದು ಕರೆಯಲ್ಪಡುವ ಕಸಿಯ ಮೂಲಕ ತಯಾರಿಸಲಾಗಿದೆ, ಅದು ಸುಲಭವಾಗಿ ಲಭ್ಯವಿಲ್ಲವಾಗುವುದಿಲ್ಲ. ಚಹಾ ಮೊಗ್ಗುಗಳನ್ನು ಮುಂಜಾನೆ ಕಿತ್ತು ತರಬೇಕು. ಇದು ಕೈಯಿಂದ ತಯಾರಿಸಿದ ಚಹಾ ವಿಧವಾಗಿದೆ. ಒಂದು ವರ್ಷದಲ್ಲಿ, ನಾವು ಕೇವಲ ಐದು ಕಿಲೋಗ್ರಾಂ ಇಳುವರಿ ಪಡೆದುಕೊಂಡಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.