ನವದೆಹಲಿ: CEOWORLD ನಿಯತಕಾಲಿಕೆಯ ‘ವಿಶ್ವದ ಅತ್ಯಂತ ಪ್ರಭಾವಿ ಮುಖ್ಯ ಕಾರ್ಯನಿರ್ವಾಹಕರು (ಸಿಇಓ) 2019’ ಜಾಗತಿಕ ಶ್ರೇಯಾಂಕದಲ್ಲಿ ಭಾರತದ 10 ಸಿಇಒಗಳು ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ನಂ.1 ಶ್ರೀಮಂತ ಮುಖೇಶ್ ಅಂಬಾನಿ, ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್ ಮತ್ತು ಒಎನ್ಜಿಸಿ ಮುಖ್ಯಸ್ಥ ಶಶಿ ಶಂಕರ್ ಪಟ್ಟಿಯಲ್ಲಿದ್ದಾರೆ.
ಆರ್ಸೆಲರ್ ಮಿತ್ತಲ್ ಮುಖ್ಯಸ್ಥ ಮತ್ತು ಸಿಇಒ ಲಕ್ಷ್ಮಿ ಮಿತ್ತಲ್ ಅವರು ಅತೀ ಹೆಚ್ಚು ಶ್ರೇಯಾಂಕ ಪಡೆದ ಭಾರತೀಯ ಸಿಇಒ ಆಗಿದ್ದಾರೆ. ಆದರೆ ಶ್ರೇಯಾಂಕದ ಪಟ್ಟಿಯಲ್ಲಿ ಅವರ ಕಂಪನಿಯನ್ನು ಲಕ್ಸೆಂಬರ್ಗ್ ಮೂಲದ ಸಂಸ್ಥೆಯೆಂದು ಪರಿಗಣಿತವಾಗಿದೆ.
ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಬಾನಿ ಈ ಪಟ್ಟಿಯಲ್ಲಿ 49 ನೇ ಸ್ಥಾನದಲ್ಲಿದ್ದರೆ, ಸಂಜೀವ್ ಸಿಂಗ್ 69 ನೇ ಸ್ಥಾನದಲ್ಲಿದ್ದಾರೆ. ಒಎನ್ಜಿಸಿ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಿ ಶಂಕರ್ ಪಟ್ಟಿಯಲ್ಲಿ 77 ನೇ ಸ್ಥಾನದಲ್ಲಿದ್ದಾರೆ.
ಪಟ್ಟಿಯಲ್ಲಿ ವಿಶ್ವದ ಒಟ್ಟು 121 ಸಿಇಓಗಳು ಸ್ಥಾನ ಪಡೆದುಕೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಧ್ಯಕ್ಷ ರಜನೀಶ್ ಕುಮಾರ್ (83 ನೇ ಸ್ಥಾನ), ಟಾಟಾ ಮೋಟಾರ್ಸ್ ಸಿಇಒ ಗುಂಟರ್ ಬುಟ್ಶೆಕ್ (89 ನೇ ಸ್ಥಾನ), ಬಿಪಿಸಿಎಲ್ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ. ರಾಜ್ಕುಮಾರ್ (94 ನೇ ಸ್ಥಾನ), ರಾಜೇಶ್ ಎಕ್ಸ್ಪೋರ್ಟ್ಸ್ ಕಾರ್ಯನಿರ್ವಾಹಕ ಅಧ್ಯಕ್ಷ ರಾಜೇಶ್ ಮೆಹ್ತಾ (99 ನೇ ಸ್ಥಾನ), ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಿಇಒ ರಾಜೇಶ್ ಗೋಪಿನಾಥನ್ ಮತ್ತು ವಿಪ್ರೊ ಸಿಇಓ ಅಬಿದಾಲಿ ಎನ್. ನೀಮುಚ್ವಾಲಾ (118 ನೇ ಸ್ಥಾನ) ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಭಾರತದ ಇತರ ಸಿಇಓಗಳಾಗಿದ್ದಾರೆ.
CEOWORLD ನಿಯತಕಾಲಿಕೆಯ ಶ್ರೇಯಾಂಕದಲ್ಲಿ ವಾಲ್ಮಾರ್ಟ್ ಸಿಇಒ ಡೌಗ್ಲಾಸ್ ಮೆಕ್ಮಿಲನ್ ಅವರು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ, ರಾಯಲ್ ಡಚ್ ಶೆಲ್ನ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಬೆನ್ ವ್ಯಾನ್ ಬ್ಯುರ್ಡೆನ್ 2ನೇ ಸ್ಥಾನದಲ್ಲಿದ್ದಾರೆ. ಲಕ್ಷ್ಮೀ ಮಿತ್ತಲ್ 3ನೇ ಸ್ಥಾನದಲ್ಲಿದ್ದಾರೆ. ಸೌದಿ ಅರ್ಮ್ಯಾಕೊ ಸಿಇಓ ಅಮಿನ್ ಎಚ್ ನಾಸೀರ್ 4ನೇ ಸ್ಥಾನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.