ನವದೆಹಲಿ: ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕೊನೆಗೂ ದೆಹಲಿಯಲ್ಲಿನ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಎಸ್ಟೇಟ್ ಇಲಾಖೆಯೊಂದಿಗಿನ ಎಲ್ಲಾ ಬಾಕಿಗಳನ್ನು ಪಾವತಿಸಿ ಅವರು ಬಂಗಲೆಯನ್ನು ಖಾಲಿ ಮಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಬಂಗಲೆ ತನಗೆ ನೀಡಬೇಕೆಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡಿದ್ದರು, ಆದರೆ ಈ ಮನವಿಯನ್ನು ಕೇಂದ್ರ ತಿರಸ್ಕರಿಸಿತ್ತು.
ತನ್ನ ಪಾಲಿಗೆ, ಬಂಗಲೆ ಉಳಿಸಿಕೊಳ್ಳಲು ತಾನು ಕೇಳಿದ ಯಾವುದೇ ವರದಿಯು ನಿಜವೆಂದು ಸಿಂಧಿಯಾ ನಿರಾಕರಿಸಿದ್ದರು.
ಬಂಗಲೆಯನ್ನು ಖಾಲಿ ಮಾಡಿದ ಬಳಿಕ ಟ್ವೀಟ್ ಮಾಡಿರುವ ಸಿಂಧಿಯಾ, “ಮೇ 23ರ ಚುನಾವಣಾ ಆದೇಶವನ್ನು ವಿನಮ್ರವಾಗಿ ಸ್ವೀಕರಿಸಿದ್ದೇನೆ ಮತ್ತು ನನಗೆ ಮಂಜೂರು ಮಾಡಿದ ಸರ್ಕಾರಿ ಬಂಗಲೆಯಿಂದ ಹೊರಹೋಗಲು ಸಿದ್ಧತೆಗಳನ್ನು ಪ್ರಾರಂಭಿಸಿದ್ದೇನೆ. ಯಾವುದನ್ನು ಅನಧಿಕೃತವಾಗಿ ಹೊಂದುವ ಬಯಕೆ ನನಗಿಲ್ಲ. ಬಂಗಲೆಗಾಗಿ ನಾನು ವಿನಂತಿ ಮಾಡಿಕೊಂಡಿದ್ದೇನೆ ಎಂಬ ಸುದ್ದಿ ಸುಳ್ಳು” ಎಂದಿದ್ದಾರೆ.
ಸಿಂಧಿಯಾ ಅವರು 16 ನೇ ಲೋಕಸಭೆಯಲ್ಲಿ ಮಧ್ಯಪ್ರದೇಶದ ಗುಣ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿದ್ದರು. ನಂತರ ಅವರು 17 ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸೋತಿದ್ದರು.
ನಿಯಮಗಳ ಪ್ರಕಾರ, ಲೋಕಸಭೆಯು ವಿಸರ್ಜನೆಯಾದ ಒಂದು ತಿಂಗಳೊಳಗೆ ಮಾಜಿ ಸಂಸದರು ತಮ್ಮ ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕಾಗುತ್ತದೆ. 16ನೇ ಲೋಕಸಭೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 25 ಮೇ 2019 ರಂದು ವಿಸರ್ಜಿಸಿದರು. ಆದರೆ ಸಿಂಧೀಯಾ ಈಗ ತಮ್ಮ ಬಂಗಲೆಯನ್ನು ಖಾಲಿ ಮಾಡುತ್ತಿದ್ದಾರೆ.
ಸಿಂಧಿಯಾ ಅವರು ಲೋಕಸಭೆಯಲ್ಲಿ 2002-2019ರವರೆಗೆ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಈ ವರ್ಷಗಳಲ್ಲಿ ಅವರು 27 ಸಫ್ದರ್ಜಂಗ್ ರಸ್ತೆ ಬಂಗಲೆಯಲ್ಲಿ ವಾಸವಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.