ನವದೆಹಲಿ: ಭಾರತೀಯ ವಾಯುಸೇನೆಗೆ ದೊಡ್ಡ ಮಟ್ಟದ ಉತ್ತೇಜನವನ್ನು ನೀಡಲು, ಮೊದಲ ಬ್ಯಾಚ್ನ ಬೋಯಿಂಗ್ ಎಎಚ್ -64 ಇ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ಗಳು ಶನಿವಾರ ಘಾಜಿಯಾಬಾದ್ನ ಹಿಂಡನ್ ವಾಯುನೆಲೆಗೆ ಆಗಮಿಸಲಿವೆ. ಅಮೆರಿಕಾ ರಕ್ಷಣಾ ಉತ್ಪಾದನೆಯ ದೈತ್ಯ ಸಂಸ್ಥೆಯಾದ ಬೋಯಿಂಗ್ನಿಂದ ಎಎಚ್-64 ಇ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ಗಳ ರವಾನೆ ಆಂಟೊನೊವ್ ಎಎನ್ 224 ಸಾರಿಗೆ ವಿಮಾನದಲ್ಲಿ ಇಂದು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.
ವರದಿಗಳ ಪ್ರಕಾರ, ಮೊದಲ ಬ್ಯಾಚ್ನಲ್ಲಿ ಮೂರರಿಂದ ನಾಲ್ಕು ಎಎಚ್ -64 ಇ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತಿದೆ.
ಅಂತಿಮ ಜೋಡಣೆ ಮತ್ತು ಬಳಕೆದಾರ ಪ್ರಯೋಗಗಳ ನಂತರ, ಈ ಹೆಲಿಕಾಪ್ಟರ್ಗಳನ್ನು ಭಾರತ-ಪಾಕಿಸ್ಥಾನ ಗಡಿ ಸಮೀಪವಿರುವ ಪಠಾಣ್ಕೋಟ್ ವಾಯುನೆಲೆಗೆ ಸ್ಥಳಾಂತರ ಮಾಡಲಾಗುತ್ತದೆ.
ವರದಿಯ ಪ್ರಕಾರ, ಗ್ರೂಪ್ ಕ್ಯಾಪ್ಟನ್ ಎಂ ಶೈಲು ಅವರು ಸ್ಕ್ವಾಡ್ರನ್ಗ ಕಮಾಂಡ್ ಮಾಡಲಿದ್ದಾರೆ. ಪ್ರಸ್ತುತ, ಮಿ -35 ಚಾಪರ್ಗಳ 125 ಹೆಲಿಕಾಪ್ಟರ್ ಸ್ಕ್ವಾಡ್ರನ್ ಕೂಡ ಪಠಾಣ್ಕೋಟ್ನಲ್ಲಿ ನೆಲೆಕಂಡುಕೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.