ಡೆಹ್ರಾಡೂನ್: ಉತ್ತರಾಖಂಡದ ರೂರ್ಕಿಯಲ್ಲಿನ ತೋಡ ಕಲ್ಯಾಣಪುರ್ ಗ್ರಾಮದಲ್ಲಿ ಸುಮಾರು 500 ಭಾರತೀಯ ಯೋಧರು ಮತ್ತು ಅವರ ಕುಟುಂಬಿಕರು ಸೇರಿ ಹಣ್ಣುಗಳನ್ನು ನೀಡುವ ಸುಮಾರು 700 ಗಿಡಗಳನ್ನು ನೆಟ್ಟಿದ್ದಾರೆ.
ಇನ್ಫಾಂಟ್ರಿ ಬ್ರಿಗೇಡಿನ ಕಮಾಂಡರ್ ಈ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದರು. 210 ಮಾವಿನ ಹಣ್ಣಿನ ಗಿಡ, 66 ಪೇರಳೆ ಹಣ್ಣಿನ ಗಿಡ, 35 ಜಾಮೂನಿನ ಗಿಡ, 10 ನೆಲ್ಲಿಕಾಯಿ ಮರ, 178 ಅರ್ಜುನ ಗಿಡಗಳನ್ನು ಸೇರಿದಂತೆ ಒಟ್ಟು 700 ಗಿಡಗಳನ್ನು ಎರಡು ಎಕರೆ ಪ್ರದೇಶದಲ್ಲಿ ನೆಡಲಾಗಿದೆ.
ಜಿಲ್ಲಾ ತೋಟಗಾರಿಕಾ ಇಲಾಖೆ ಮತ್ತು ಅರಣ್ಯ ಇಲಾಖೆ ಈ ಗಿಡಗಳನ್ನು ಇನ್ಫಾಂಟ್ರಿ ಬ್ರಿಗೇಡಿಗೆ ಪೂರೈಕೆ ಮಾಡಿದೆ.
“ಅರಣ್ಯೀಕರಣ ಕಾಯಕವನ್ನು ಮಾಡುತ್ತಿರುವ ಭಾರತೀಯ ಸೇನೆಯ ಪ್ರಯತ್ನವನ್ನು ನಾವು ಶ್ಲಾಘಿಸುತ್ತೇವೆ. ಅವರ ಕಾಯಕದಲ್ಲಿ ನಾವು ಕೈಜೋಡಿಸಿದ್ದೇವೆ ಎಂಬುದೇ ನಮಗೆ ಹೆಮ್ಮೆ” ಎಂದು ತೋಟಗಾರಿಕೆ ಇಲಾಖೆಯ ಮುಖ್ಯ ಅಧಿಕಾರಿ ಐಪಿ ಕುಶ್ವಾಹ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.