ರೋಮ್: ಭಾರತದ ಸುಮಾರು 28 ಭಾಷೆಗಳ 3000 ವರ್ಷ ಹಳೆಯದಾದ 100 ಕವನಗಳನ್ನು ಒಳಗೊಂಡ ಪುಸ್ತಕವನ್ನು ಇಟಲಿ ಭಾಷೆಗೆ ಭಾಷಾಂತರಗೊಳಿಸಲಾಗಿದೆ. ಮಡಗಾಸ್ಕರ್ ಮತ್ತು ಕೊಮೊರೊಸ್ಗೆ ಭಾರತದ ರಾಯಭಾರಿಯಾಗಿರುವ ಅಭಯ್ ಕುಮಾರ್ ಅವರು ಸಂಕಲನ ಮಾಡಿರುವ ‘”100 ಗ್ರೇಟ್ ಇಂಡಿಯನ್ ಪೋಯಮ್ಸ್’ ಪುಸ್ತಕವನ್ನು, ‘100 ಗ್ರ್ಯಾಂಡಿ ಪೊಯೆಸಿ ಇಂಡಿಯನ್’ ಎಂಬ ಶೀರ್ಷಿಕೆಯೊಂದಿಗೆ ಇಟಲಿ ಭಾಷೆಯಲ್ಲಿ ರೋಮ್ನಲ್ಲಿ ಎಡಿಜಿಯೋನಿ ಎಫೆಸ್ಟೋ ಪ್ರಕಟಿಸಿದೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ, ಈ ಪುಸ್ತಕದ ಸ್ಪ್ಯಾನಿಷ್ ಆವೃತ್ತಿಯಾದ ‘ಸಿಯಾನ್ ಗ್ರ್ಯಾಂಡೆಸ್ ಪೊಯೆಮಾಸ್ ಡೆ ಲಾ ಇಂಡಿಯಾ’ ಅನ್ನು ಮೆಕ್ಸಿಕೊ ನಗರದ ಯುಎನ್ಎಎಂ ವಿಶ್ವವಿದ್ಯಾಲಯ ಮತ್ತು ಮೆಕ್ಸಿಕೊದ ಮಾಂಟೆರಿಯಲ್ಲಿರುವ ಕಾಸಾ ಡೆಲ್ ಲಿಬ್ರೋಸ್ನಲ್ಲಿ ಪ್ರಕಟಿಸಲಾಗಿತ್ತು. ಅದರ ಪೋರ್ಚುಗೀಸ್ ಆವೃತ್ತಿಯಾದ ‘100 ಗ್ರ್ಯಾಂಡೆಸ್ ಪೊಯೆಮಾಸ್ ಡಾ ಇಂಡಿಯಾ’ವನ್ನು ಫೆಬ್ರವರಿ 2018 ರಲ್ಲಿ ಸಾವೊ ಪಾಲೊ ವಿಶ್ವವಿದ್ಯಾಲಯ ಪ್ರಕಟಿಸಿತು.
ತನ್ನ ಸಂಕಲನ ಪ್ರಕಟಣೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರ್, ಪುಸ್ತಕದ ಇಟಾಲಿಯನ್ ಆವೃತ್ತಿಯು ಪೋರ್ಚುಗೀಸ್ ಮತ್ತು ಸ್ಪ್ಯಾನಿಷ್ ಆವೃತ್ತಿಗಳೊಂದಿಗೆ ಭಾರತ, ಯುರೋಪ್ ಮತ್ತು ಇಟಲಿ ನಡುವೆ ಸಾಹಿತ್ಯ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಹಲವಾರು ಪ್ರಸಿದ್ಧ ಇಟಾಲಿಯನ್ ಕವಿ-ಅನುವಾದಕರು ಸೇರಿ ಈ ಪುಸ್ತಕದಲ್ಲಿನ ಭಾರತೀಯ ಕವಿತೆಗಳನ್ನು ಇಟಾಲಿಯನ್ ಭಾಷೆಗೆ ಅನುವಾದಿಸಿದ್ದಾರೆ. ಈ ಕವನಗಳನ್ನು ನೇಪಾಳಿ ಮತ್ತು ರಷ್ಯನ್ ಭಾಷೆಗಳಿಗೂ ಅನುವಾದಿಸಲಾಗಿದೆ.
ಸಂಕಲನದ ನೇಪಾಳಿ ಆವೃತ್ತಿ ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.