ನವದೆಹಲಿ: ಇಡೀ ದೇಶದ ಜನಸಂಖ್ಯೆ, ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಮಾಹಿತಿ ನೀಡುವ 5 ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (National Family Health Survey) ಗಾಗಿ ಭಾರತ ದತ್ತಾಂಶ ಸಂಗ್ರಹಿಸಲು ಪ್ರಾರಂಭಿಸಿದೆ.
“ಸಮೀಕ್ಷೆಯ ಮೊದಲ ಹಂತದ ದತ್ತಾಂಶ ಸಂಗ್ರಹವು ಸುಮಾರು ಎರಡು ವಾರಗಳ ಹಿಂದೆ ಪ್ರಾರಂಭವಾಗಿದೆ” ಎಂದು ಮುಂಬಯಿ ಮೂಲದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಷನ್ ಸೈನ್ಸಸ್ (ಐಐಪಿಎಸ್)ನ ನಿರ್ದೇಶಕ ಡಾ. ಕೆ.ಎಸ್. ಜೇಮ್ಸ್ ಮಾಹಿತಿ ನೀಡಿದ್ದಾರೆ. ಈ ಸಂಸ್ಥೆಯು ಸರ್ಕಾರಕ್ಕಾಗಿ ಸಮೀಕ್ಷೆಯನ್ನು ನಡೆಸುತ್ತದೆ.
ಹಿಂದಿನ ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಇದ್ದ ಅಂಶಗಳಿಗೆ ಯಾವುದೇ ಪ್ರಮುಖ ಸೇರ್ಪಡೆಗಳನ್ನು ಮಾಡಲಾಗಿಲ್ಲ, ಆದರೆ ಕೇವಲ ಕೆಲವು ಪ್ರಸಕ್ತ ನಿಯತಾಂಕಗಳನ್ನು ನಿರ್ಧರಿಸಲು ವಯಸ್ಸಿನ ಗುಂಪಿನ ವಿಸ್ತರಣೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
“ಹಿಮೋಗ್ಲೋಬಿನ್ ಮಟ್ಟವನ್ನು ನಿರ್ಧರಿಸುವಂತಹ ಕೆಲವು ಬಯೋಮಾರ್ಕರ್ಗಳಿಗೆ ಎಲ್ಲಾ ಮನೆಯ ಸದಸ್ಯರನ್ನು ಒಳಪಡಿಸಲಾಗುತ್ತದೆ. ಈ ಮೊದಲು ಅದು 15 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಡಲಾಗುತ್ತಿತ್ತು. ಅದನ್ನು ಹೊರತುಪಡಿಸಿ, ಪ್ರಶ್ನಾವಳಿಯಲ್ಲಿ ಗಣನೀಯ ಬದಲಾವಣೆಗಳನ್ನು ಮಾಡಲಾಗಿಲ್ಲ” ಎಂದಿದ್ದಾರೆ.
ಸಮೀಕ್ಷೆಯು 0.7 ಮಿಲಿಯನ್ ಕುಟುಂಬಗಳ ಮಾದರಿ ಗಾತ್ರವನ್ನು ಒಳಗೊಂಡಿದೆ. ಮೊದಲ ಹಂತದಲ್ಲಿ, 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಶೇ.50ರಷ್ಟು ಕುಟುಂಬಗಳು ವ್ಯಾಪ್ತಿಗೆ ಬರಲಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಪಾಪ್ಯುಲೇಶನ್ ಕೌನ್ಸಿಲ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಬುಧವಾರ ರಾಷ್ಟ್ರೀಯ ದತ್ತಾಂಶ ಗುಣಮಟ್ಟ ವೇದಿಕೆಯನ್ನು (National Data Quality Forum (NDQF)) ಪ್ರಾರಂಭಿಸಲಾಗಿದ್ದು, ಇದು ದೇಶದಲ್ಲಿನ ದತ್ತಾಂಶ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.