ನವದೆಹಲಿ: ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳಿಗೆ ಸಮರ್ಪಿತಗೊಂಡ ಮ್ಯೂಸಿಯಂ ಅನ್ನು ರಾಷ್ಟ್ರ ರಾಜಧಾನಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್ ಅವರ ಬಗೆಗಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿಗಳ ಬಗೆಗಿನ ವಿಭಿನ್ನ ವಿಚಾರಗಳನ್ನು ಹಂಚಿಕೊಳ್ಳುವಂತೆ ಸಂಬಂಧಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
“ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ಮ್ಯೂಸಿಯಂ ಅನ್ನು ನಿರ್ಮಾಣ ಮಾಡಲಾಗುತ್ತದೆ. ಚರಣ್ ಸಿಂಗ್ ಜಿ, ದೇವೇಗೌಡ ಜಿ, ಐಕೆ ಗುಜ್ರಾಲ್ ಜಿ ಮತ್ತು ಡಾ. ಮನಮೋಹನ್ ಸಿಂಗ್ ಜಿ ಸೇರಿದಂತೆ ಮಾಜಿ ಪ್ರಧಾನಿಗಳ ಜೀವನದ ವಿಚಾರಗಳನ್ನು ಹಂಚಿಕೊಳ್ಳುವಂತೆ ನಾನು ಅವರ ಕುಟುಂಬಗಳಿಗೆ ಮನವಿಯನ್ನು ಮಾಡುತ್ತೇನೆ”ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ವೇಳೆ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ ಮೋದಿ, “ಡಾ. ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್ ಅವರಂತಹ ಶ್ರೇಷ್ಠರ ವ್ಯಕ್ತಿತ್ವಕ್ಕೆ ಧಕ್ಕೆ ತಂದ ಜನರ ಒಂದು ಗುಂಪು ಇದೆ” ಎಂದು ಹೇಳಿದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ವ್ಯಕ್ತಿತ್ವವನ್ನೂ ಇದೇ ಗುಂಪು ನಾಶಪಡಿಸಿದೆ. ಇವರುಗಳು ನಮ್ಮ ಮಾಜಿ ಪ್ರಧಾನಿಗಳ ಬಗ್ಗೆ ತಮ್ಮದೇ ಆದ ವಿಶ್ಲೇಷಣೆ, ನಿರೂಪಣೆ, ಶೀರ್ಷಿಗಳನ್ನು ನೀಡಿದ್ದಾರೆ ಎಂದರು.
ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಕೊಡುಗೆಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು, ನಮ್ಮ ರೈತರಿಗಾಗಿ, ಬಡವರಿಗಾಗಿ ಮತ್ತು ಹಿಂದುಳಿದವರಿಗಾಗಿ ಈ ನಾಯಕ ಶ್ರಮಿಸಿದ್ದಾರೆ ಎಂದರು. ಚಂದ್ರಶೇಖರ್ ಅವರ ಐತಿಹಾಸಿಕ ಪಾದಯಾತ್ರೆಯನ್ನು ಗೌರವಿಸಲಾಗಿಲ್ಲ ಎಂದು ಪ್ರಧಾನಿ ಆರೋಪಿಸಿದರು.
“ಈ ದಿನಗಳಲ್ಲಿ, ಒಬ್ಬ ಸಣ್ಣ ನಾಯಕ 10-12 ಕಿ.ಮೀ ಪಾದಯಾತ್ರೆಯನ್ನು ಮಾಡಿದರೂ ಅದು ಟಿವಿಯಲ್ಲಿ ಪ್ರಸಾರವಾಗುತ್ತದೆ. ಆದರೆ, ಚಂದ್ರಶೇಖರ್ ಅವರು ಮಾಡಿದ ಐತಿಹಾಸಿಕ ಪಾದಯಾತ್ರೆಯನ್ನು ನಾವು ಯಾಕೆ ಗೌರವಿಸಲಿಲ್ಲ. ಅವರು ಬಡ ಮತ್ತು ಹಿಂದುಳಿದವರಿಗಾಗಿ, ನಮ್ಮ ರೈತರಿಗಾಗಿ ನಡೆದರು. ಆ ನಡಿಗೆಗೆ ತಕ್ಕ ಗೌರವವನ್ನು ನೀಡಲಾಗಿಲ್ಲ. ಅಂತಹ ಮಹಾನ್ ನಾಯಕನಿಗೆ ನಾವು ಮಾಡಿದ ದೊಡ್ಡ ಅನ್ಯಾಯಗಳಲ್ಲಿ ಇದು ಕೂಡ ಒಂದಾಗಿದೆ” ಎಂದರು.
Releasing a book on our former PM Chandra Shekhar Ji. https://t.co/w1uMnohppc
— Narendra Modi (@narendramodi) July 24, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.