ನವದೆಹಲಿ: ನೆರೆಯಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಅಸ್ಸಾಂಗೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನೆರೆವಿನ ಹಸ್ತ ಚಾಚಿದ್ದಾರೆ. ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ 51 ಲಕ್ಷ ರೂಪಾಯಿಗಳನ್ನು ದಾನ ಮಾಡಿದ್ದಾರೆ. ಅಲ್ಲದೇ, ಇತರರಿಗೂ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ನೆರವು ನೀಡಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ಅವರು ಅಮಿತಾಭ್ ಬಚ್ಚನ್ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. “ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ರೂ.51 ಲಕ್ಷಗಳನ್ನು ನೀಡಿದಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಶ್ಲಾಘಿಸುತ್ತೇನೆ. ಇದು ನಿಜಕ್ಕೂ ಅದ್ಭುತ ಕಾರ್ಯ ಮತ್ತು ಜನರ ಮೇಲಿನ ಅವರ ಕಾಳಜಿಯನ್ನು ಇದು ತೋರ್ಪಡಿಸಿದೆ. ನಿಮ್ಮ ಬೆಂಬಲಕ್ಕಾಗಿ ಅಸ್ಸಾಂ ಜನತೆಯ ಪರವಾಗಿ ಧನ್ಯವಾದಗಳು” ಎಂದಿದ್ದಾರೆ.
ಅಮಿತಾಭ್ ಅವರು ಸೋನವಾಲ್ ಅವರ ಟ್ವಿಟ್ ಅನ್ನು ಹಂಚಿಕೊಂಡಿದ್ದು, ಅಸ್ಸಾಂ ತೊಂದರೆಯಲ್ಲಿದೆ, ಎಲ್ಲರೂ ಸಂತ್ರಸ್ಥರಿಗೆ ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
“ಅಸ್ಸಾಂ ಸಂಕಷ್ಟದಲ್ಲಿದೆ .. ಪ್ರವಾಹದಿಂದ ದೊಡ್ಡ ಹಾನಿಯಾಗಿದೆ .. ನಮ್ಮ ಸಹೋದರ ಸಹೋದರಿಯರ ಸುರಕ್ಷತೆಗಾಗಿ ಹಾರೈಕೆ ಮತ್ತು ಸಹಾಯವನ್ನು ಕಳುಹಿಸೋಣ. ಸಿಎಂ ರಿಲೀಫ್ ಫಂಡ್ಗೆ ಉದಾರವಾಗಿ ಕೊಡುಗೆ ನೀಡಿ .. ನಾನು ಕೊಡುಗೆಯನ್ನು ನೀಡಿದ್ದೇನೆ .. ನೀವು ಕೊಡುಗೆ ನೀಡಿ” ಎಂದಿದ್ದಾರೆ.
Assam is in distress .. the floods have caused great damage .. send care and assistance for our brothers and sisters .. contribute generously to the CM Relief Fund .. I just did .. HAVE YOU ..? 🙏🙏🙏 https://t.co/DZIpxZ0eOl
— Amitabh Bachchan (@SrBachchan) July 23, 2019
ಮತ್ತೋರ್ವ ನಟ ಅಕ್ಷಯ್ ಕುಮಾರ್ ಅಸ್ಸಾಂ ನೆರೆ ಸಂತ್ರಸ್ಥರಿಗೆ ರೂ.1 ಕೋಟಿಗಳನ್ನು ಮತ್ತು ಕಾಝೀರಂಗ ಪಾರ್ಕ್ ರಕ್ಷಣಾ ಕಾರ್ಯಕ್ಕೆ 1 ಕೋಟಿ ರೂಪಾಯಿಯನ್ನು ಕೊಡುಗೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.