ನವದೆಹಲಿ: ವಂದೇ ಮಾತರಂಗೆ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಸಮಾನವಾದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ನಿರ್ದೇಶನವನ್ನು ನೀಡಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿದೆ. ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಮನವಿಯನ್ನು ಸಲ್ಲಿಸಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಬರೆದಿರುವ ‘ವಂದೇ ಮಾತರಂ’ ಅನ್ನು ರಾಷ್ಟ್ರಗೀತೆಯಂತೆ ಸಮಾನವಾಗಿ ಪ್ರಚಾರ ಮಾಡಬೇಕೆಂಬುದು ಅವರ ಕೋರಿಕೆಯಾಗಿದೆ.
ರಾಷ್ಟ್ರೀಯ ಹಾಡು ಎಂದು ಪರಿಗಣಿಸಲ್ಪಟ್ಟಿರುವ ವಂದೇ ಮಾತರಂ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 1896 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರ್ ಅವರು ಈ ಹಾಡನ್ನು ಮೊದಲ ಬಾರಿಗೆ ಹಾಡಿದ್ದಾರೆ ಎಂದು ಉಪಾಧ್ಯಾಯ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
“ಜನ ಗಣ ಮನ” ಮತ್ತು “ವಂದೇ ಮಾತರಂ” ಎರಡನ್ನೂ ಸಮಾನವಾಗಿ ಗೌರವಿಸಬೇಕು. ‘ಜನ ಗಣ ಮನ’ ದಲ್ಲಿನ ಭಾವನೆಗಳನ್ನು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ವ್ಯಕ್ತಪಡಿಸಲಾಗಿದೆ. ‘ವಂದೇ ಮಾತರಂ’ ನಲ್ಲಿ ವ್ಯಕ್ತವಾದ ಭಾವನೆಗಳು ಅದೇ ರೀತಿಯ ಗೌರವಕ್ಕೆ ಅರ್ಹವಾಗಿವೆ ಎಂದು ಮನವಿಯಲ್ಲಿ ಹೇಳಿದ್ದಾರೆ.
‘ವಂದೇ ಮಾತರಂ’ ಅನ್ನು ‘ಜನ ಗಣ ಮನ’ ಹಾಡಿಗೆ ಸಮಾನವಾಗಿ ಗೌರವಿಸಬೇಕು ಮತ್ತು ಅದರೊಂದಿಗೆ ಸಮಾನ ಸ್ಥಾನಮಾನವನ್ನು ಅದಕ್ಕೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
1870ರಲ್ಲಿ ಬಂಕೀಮ್ ಚಂದ್ರ ಚ್ಯಾಟರ್ಜಿಯವರು ಈ ಹಾಡನ್ನು ರಚಿಸಿದರು. 1882ರಲ್ಲಿ ಬರೆಯಲಾದ ತನ್ನ ಕಾದಂಬರಿ ಆನಂದಮಠದಲ್ಲೂ ಅವರು ಈ ಹಾಡನ್ನು ಸೇರಿಸಿದ್ದಾರೆ. 1937ರ ಅಕ್ಟೋಬರ್ ತಿಂಗಳಲ್ಲಿ ಈ ಹಾಡನ್ನು ರಾಷ್ಟ್ರೀಯ ಹಾಡಾಗಿ ಸ್ವೀಕಾರ ಮಾಡಲಾಗಿದೆ. ಭಾರತವನ್ನು ತಾಯಿಗೆ ಹೋಲಿಸಿ ಈ ಹಾಡಲ್ಲಿ ವರ್ಣಿಸಲಾಗಿದೆ. ಸ್ವತಂತ್ರ ಚಳುವಳಿಯ ಸಂದರ್ಭದಲ್ಲಿ ಜನತೆಯಲ್ಲಿ ದೇಶಭಕ್ತಿಯನ್ನು ಹುಟ್ಟು ಹಾಕುವಲ್ಲಿ ‘ವಂದೇ ಮಾತರಂ’ ಬಹು ಮುಖ್ಯ ಪಾತ್ರವನ್ನು ವಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.