ನವದೆಹಲಿ: ದೇಶ ಇಂದು ಇಬ್ಬರು ಮಹಾನ್ ಪುರುಷರ ಜನ್ಮ ದಿನವನ್ನು ಆಚರಿಸುತ್ತಿದೆ. ಚಂದ್ರಶೇಖರ್ ಆಜಾದ್ ಮತ್ತು ಲೋಕಮಾನ್ಯ ಬಾಲಗಂಗಾಧರ್ ತಿಲಕ್. ಪ್ರಧಾನಿ ನರೇಂದ್ರ ಮೋದಿಯವರು ಇಬ್ಬರನ್ನೂ ಟ್ವಿಟರ್ ಮೂಲಕ ಸ್ಮರಿಸಿಕೊಂಡಿದ್ದಾರೆ.
ಚಂದ್ರಶೇಖರ್ ಆಜಾದ್ ಅವರ ತ್ಯಾಗವನ್ನು ಕೊಂಡಾಡಿರುವ ಮೋದಿ, “ಭಾರತ ಮಾತೆಯ ವೀರ ಸುಪುತ್ರ ಚಂದ್ರಶೇಖರ್ ಆಜಾದ್ ಅವರ ಜಯಂತಿಯಂದು ನನ್ನ ವಿನಮ್ರ ಶ್ರದ್ಧಾಂಜಲಿ. ಅವರು ಒಬ್ಬ ನಿರ್ಭೀತ ಮತ್ತು ದೃಢ ನಿಶ್ಚಯ ಹೊಂದಿದ ಕ್ರಾಂತಿಕ್ರಾರಿಯಾಗಿದ್ದರು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಅವರು ಆಹುತಿ ನೀಡಿದರು. ಅವರ ವೀರತ್ವದ ಯಶೋಗಾಥೆ ದೇಶವಾಸಿಗಳಿಗೆ ಪ್ರೇರಣೆಯಾಗಿದೆ” ಎಂದಿದ್ದಾರೆ.
भारत माता के वीर सपूत चंद्रशेखर आजाद को उनकी जयंती पर मेरी विनम्र श्रद्धांजलि। वे एक निर्भीक और दृढ़ निश्चयी क्रांतिकारी थे, जिन्होंने देश की आजादी के लिए अपने जीवन की आहुति दे दी। उनकी वीरता की गाथा देशवासियों के लिए प्रेरणा का एक स्रोत है। pic.twitter.com/nuHIfqi62J
— Narendra Modi (@narendramodi) July 23, 2019
ಲೋಕಮಾನ್ಯ ತಿಲಕರನ್ನು ನೆನಪಿಸಿಕೊಂಡಿರುವ ಮೋದಿ, ‘ಲೋಕಮಾನ್ಯ ತಿಲಕರಿಗೆ ಅವರ ಜಯಂತಿಯ ಅಂಗವಾಗಿ ಕೋಟಿ ಕೋಟಿ ನಮನಗಳು. ದೇಶಭಕ್ತಿಯ ಭಾವನೆಯಿಂದ ಪ್ರೇರೇಪಿತಗೊಂಡಿದ್ದ ಅವರು ತಮ್ಮ ಇಡೀ ಜೀವನವನ್ನೇ ಪೂರ್ಣ ಸ್ವರಾಜ್ಯಕ್ಕಾಗಿ ಸಮರ್ಪಣೆಗೊಳಿಸಿದರು. ಈ ಕೃತಜ್ಞ ದೇಶವು ಅವರ ತ್ಯಾಗವನ್ನು ಸದಾ ಸ್ಮರಿಸಿಕೊಳ್ಳುತ್ತದೆ” ಎಂದಿದ್ದಾರೆ.
लोकमान्य तिलक को उनकी जयंती पर कोटि-कोटि नमन। देशभक्ति की भावना से ओतप्रोत वे एक ऐसे स्वतंत्रता सेनानी थे, जिन्होंने पूर्ण स्वराज के लिए अपना जीवन समर्पित कर दिया। कृतज्ञ राष्ट्र उनके योगदान को सदैव स्मरण करता रहेगा। pic.twitter.com/1YJYz0tNbH
— Narendra Modi (@narendramodi) July 23, 2019
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ದೇಶದ ಗಣ್ಯರು ಈರ್ವರನ್ನೂ ಸ್ಮರಿಸಿ ಟ್ವೀಟ್ ಮಾಡಿದ್ದಾರೆ.
ಚಂದ್ರಶೇಖರ್ ಆಜಾದ್ ಅವರು ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಭಬ್ರ ಗ್ರಾಮದಲ್ಲಿ 1906ರ ಜುಲೈ 23ರಂದು ಜನಿಸಿದರು. ಲೋಕಮಾನ್ಯ ತಿಲಕರು ಮಹಾರಾಷ್ಟ್ರದ ರತ್ನಗಿರಿಯಲ್ಲಿ 1856ರ ಜುಲೈ 23ರಂದು ಜನಿಸಿದರು. ಇವರಿಬ್ಬರು ಭಾರತದ ಸ್ವಾತಂತ್ರ್ಯಕ್ಕಾಗಿ ನೀಡಿದೆ ಕೊಡುಗೆ ಅಪಾರವಾಗಿದ್ದು, ಮುಂದಿನ ತಲೆಮಾರುಗಳು ಕೂಡ ಇವರ ತ್ಯಾಗವನ್ನು ಸ್ಮರಿಸಿ ಪ್ರೇರಣೆಯನ್ನು ಪಡೆದುಕೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.