ಚೆನ್ನೈ: ಹೊಸತಾಗಿ ಆರಂಭವಾದ ಚೆನ್ನೈ ಮೆಟ್ರೋ ರೈಲಿನಲ್ಲಿ ಬುಧವಾರ ಪ್ರಯಾಣಿಸಿದ್ದ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ವ್ಯಕ್ತಿಯೊಬ್ಬನಿಗೆ ಕೆನ್ನೆಗೆ ಬಾರಿಸುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಈ ಸುದ್ದಿ ಗುರುವಾರ ಬಹಿರಂಗವಾಗಿದ್ದು, ಸ್ಟಾಲಿನ್ ವ್ಯಕ್ತಿಗೆ ಕೆನ್ನೆಗೆ ಬಾರಿಸುವ ವೀಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದೆ.
ವ್ಯಕ್ತಿ ಡಿಎಂಕೆ ಕಾರ್ಯಕರ್ತನೇ ಆಗಿದ್ದು, ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ಪಕ್ಕದಲ್ಲಿ ನಿಂತಿದ್ದ ಈತನನ್ನು ಆಚೆ ಹೋಗುವಂತೆ ಸ್ಟಾಲಿನ್ ಸೂಚಿಸಿದ್ದಾರೆ. ಅಲ್ಲದೇ ಕೆನ್ನೆಗೆ ಬಾರಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಈ ಘಟನೆಯನ್ನು ಖಂಡಿದ್ದಾರೆ. ಆದರೆ ಸ್ಟಾಲಿನ್ ಈ ಆರೋಪವನ್ನು ತಳ್ಳಿ ಹಾಕದ್ದು, ಜಯಾ ಕಡ್ಡಿಯನ್ನು ಗುಡ್ಡ ಮಾಡುತ್ತಿದ್ದಾರೆ ಎಂದಿದ್ದಾರೆ.
ಸ್ಟಾಲಿನ್ ವರ್ತನೆಗೆ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಡಿಎಂಕೆಗೆ ತೀವ್ರ ಮುಜುಗರ ತರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.