ನವದೆಹಲಿ: 2018-19ರ ಸಾಲಿನಲ್ಲಿ ಪ್ರವಾಸೋದ್ಯಮ ಸಚಿವಾಲಯವು ಜಾಗತಿಕವಾಗಿ ಬಿಡುಗಡೆ ಮಾಡಿದ ಇನ್ಕ್ರೆಡಿಬಲ್ ಇಂಡಿಯಾ “ಫೈಂಡ್ ದಿ ಇನ್ಕ್ರೆಡಿಬಲ್ ಯು” ಅಭಿಯಾನವು PATA (ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್) ಗೋಲ್ಡ್ ಅವಾರ್ಡ್ 2019 ಅನ್ನು ಮುಡಿಗೇರಿಸಿಕೊಂಡಿದೆ. “ಮಾರ್ಕೆಟಿಂಗ್ – ಪ್ರೈಮರಿ” ಕೆಟಗರಿಯಲ್ಲಿ ಈ ಅಭಿಯಾನವನ್ನು ವಿಜೇತ ಎಂದು ಘೋಷಿಸಲಾಗಿದೆ. ಈ ವರ್ಷದ ಪ್ರಶಸ್ತಿಗಳಿಗಾಗಿ ವಿಶ್ವದಾದ್ಯಂತದ 78 ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ 198 ಎಂಟ್ರಿಗಳು ಬಂದಿದ್ದವು.
ಪ್ರವಾಸೋದ್ಯಮ ಸಚಿವಾಲಯವು ತನ್ನ ಪ್ರಚಾರ ಕಾರ್ಯಕ್ರಮಗಳ ಭಾಗವಾಗಿ ವಾರ್ಷಿಕವಾಗಿ, ವಿದೇಶಗಳಲ್ಲಿನ ಪ್ರಮುಖ ಮತ್ತು ಸಂಭಾವ್ಯ ಮೂಲ ಮಾರುಕಟ್ಟೆಗಳಲ್ಲಿ ಟೆಲಿವಿಷನ್, ಪ್ರಿಂಟ್, ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ‘ಇನ್ಕ್ರೆಡಿಬಲ್ ಇಂಡಿಯಾ’ ಬ್ರಾಂಡ್-ಲೈನ್ ಅಡಿಯಲ್ಲಿ ಜಾಗತಿಕ ಮಾಧ್ಯಮ ಅಭಿಯಾನಗಳನ್ನು ಬಿಡುಗಡೆ ಮಾಡುತ್ತದೆ.
ಈ ಅಭಿಯಾನಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ, ‘ಇನ್ಕ್ರೆಡಿಬಲ್ ಇಂಡಿಯಾ 2.0’ ಅಭಿಯಾನವನ್ನು ಸೆಪ್ಟೆಂಬರ್ 2017 ರಲ್ಲಿ ಪ್ರಾರಂಭಿಸಲಾಯಿತು, ಇದು ವಿಶ್ವದಾದ್ಯಂತ ಕೈಗೊಂಡ ಸಾಮಾನ್ಯ ಪ್ರಚಾರಗಳ ಬದಲು ಮಾರುಕಟ್ಟೆ-ನಿರ್ದಿಷ್ಟ ಪ್ರಚಾರ ಯೋಜನೆಗಳು ಮತ್ತು ವಿಷಯ ರಚನೆಗೆ ಪರಿವರ್ತನೆಗೊಂಡಿದೆ. ಈ ಅಭಿಯಾನವು ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಮತ್ತು ದೇಶದ ಸ್ಥಾಪಿತ ಪ್ರವಾಸೋದ್ಯಮ ಉತ್ಪನ್ನಗಳ ಪ್ರಚಾರದ ಮೇಲೆ ಕೇಂದ್ರೀಕೃತವಾಗಿದೆ.
2.0 ಅಭಿಯಾನದ ಭಾಗವಾಗಿ, ಐದು ಹೊಸ ದೂರದರ್ಶನ ಜಾಹೀರಾತುಗಳನ್ನು ಸಚಿವಾಲಯವು ನಿರ್ಮಿಸಿತು, ಇದನ್ನು ದೂರದರ್ಶನ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜಾಗತಿಕವಾಗಿ ಪ್ರಸಾರ ಮಾಡಲಾಯಿತು. ಅವುಗಳೆಂದರೆ:
Yoga: “The Yogi of the Racetrack”
Wellness: “The Reincarnation of Mr. and Mrs. Jones”
Luxury: “The Maharani of Manhattan”
Cuisine: “The Masala MasterChef”
Wildlife: “The Sanctuary in Paris”
ಪ್ರವಾಸಿ ತಾಣಗಳ ಬಾಹ್ಯ ಅನುಭವದಿಂದ ಪ್ರಯಾಣಿಕರನ್ನು ಅವುಗಳ ಆಂತರಿಕ ಅನುಭವಕ್ಕೆ ಬದಲಾಯಿಸುವುದು ಪ್ರಚಾರದ ಪ್ರಮುಖ ತಂತ್ರವಾಗಿತ್ತು. ಈ ಪರಿವರ್ತನಶೀಲ ಅನುಭವಗಳ ಸರಣಿಯನ್ನು ಆತ್ಮಚರಿತ್ರೆಯ ಸ್ವರೂಪದಲ್ಲಿ ಸ್ವಾರಸ್ಯವಾಗಿ ಕಥೆ ಹೇಳುವಂತೆ ಪ್ರವಾಸಿಗರ ಮನಕ್ಕೆ ಮುಟ್ಟಿಸಲಾಗಿದೆ, “ಫೈಂಡ್ ದಿ ಇನ್ಕ್ರೆಡಿಬಲ್ ಯು’ ಟ್ಯಾಗ್ ಲೈನ್ನೊಂದಿಗೆ ಇದನ್ನು ಪ್ರಸಾರ ಮಾಡಲಾಗಿದೆ.
ಈ ಸರಣಿಯು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ 153 ಮಿಲಿಯನ್ ವೀಕ್ಷಣೆಗಳನ್ನು ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.