ನವದೆಹಲಿ: ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಗಳಿಗೆ 2019-2020ರ ಸಾಲಿನಲ್ಲಿ ಅನುದಾನವನ್ನು ನೀಡುವ ಬೇಡಿಕೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಪ್ರತಿಕ್ರಿಯೆಯ ಬಳಿಕ ಧ್ವನಿ ಮತದಿಂದ ಅನುದಾನ ಬಿಡುಗಡೆಯ ಬೇಡಿಕೆಗಳನ್ನು ಅಂಗೀಕರಿಸಲಾಯಿತು. ಸಣ್ಣ ಮತ್ತು ಮಧ್ಯಮ ರೈತರಿಗೆ ಸಹಾಯ ಮಾಡಲು ಪಿಎಂ-ಕಿಸಾನ್ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ತೋಮರ್ ಅಭಿಪ್ರಾಯಿಸಿದ್ದಾರೆ.
ದೇಶದಲ್ಲಿ 14.5 ಕೋಟಿ ರೈತರು ಇದ್ದಾರೆ, ಅದರಲ್ಲಿ 12.5 ಕೋಟಿ ರೈತರು 10 ಬಿಘಾಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿದ್ದಾರೆ, ಅವರ ಸರಾಸರಿ ಆದಾಯವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ರೈತರ ಬಗ್ಗೆ ಗಮನವನ್ನು ಹರಿಸಿ ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದರು” ಎಂದು ತೋಮರ್ ಹೇಳಿದ್ದಾರೆ.
ರೈತರ ಪಟ್ಟಿಗಳನ್ನು ನೀಡಿದ ರಾಜ್ಯಗಳ ರೈತರ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ.
ಈ ಯೋಜನೆಯಡಿ ರೈತರಿಗೆ ನೀಡಲಾಗುವ ಹಣ ತೀರಾ ಕಡಿಮೆ ಎಂದು ಪ್ರತಿಪಕ್ಷಗಳು ಮಾಡಿರುವ ಟೀಕೆಯನ್ನು ಉಲ್ಲೇಖಿಸಿರುವ ಅವರು, ರೈತರಿಗೆ ಸಹಾಯ ಮಾಡಲು ಇಂತಹ ಯಾವುದೇ ಕಾರ್ಯಕ್ರಮವನ್ನು ಈ ಹಿಂದೆ ಅನುಷ್ಠಾನಗೊಳಿಸಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
“ರೈತರ ಜೇಬಿಗೆ ನೇರವಾಗಿ 87,000 ಕೋಟಿ ರೂ. ವರ್ಗಾವಣೆಯಾಗುತ್ತಿದೆ” ಎಂದಿದ್ದಾರೆ.
2018ರ ಡಿಸೆಂಬರ್ 1 ರಿಂದ ಅನುಷ್ಠಾನಕ್ಕೆ ಬಂದಿರುವ ಪಿಎಂ-ಕಿಸಾನ್ ಯೋಜನೆಯು ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ವಾರ್ಷಿಕ ಆರು ಸಾವಿರ ರೂಪಾಯಿಗಳನ್ನು ಒದಗಿಸುತ್ತದೆ. ಒಟ್ಟು ಮೂರು ಕಂತುಗಳಲ್ಲಿ ಹಣ ಸಂದಾಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.