ನವದೆಹಲಿ: ದೇಶದಲ್ಲಿ ನೆಲೆಸಿರುವ ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ, ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರವೇ ಗಡಿಪಾರು ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
“ಈ ದೇಶದ ಪ್ರತಿ ಮೂಲೆಯಲ್ಲಿ ವಾಸಿಸುವ ಎಲ್ಲಾ ಅಕ್ರಮ ವಲಸಿಗರು ಮತ್ತು ಒಳನುಸುಳುಕೋರರನ್ನು ನಾವು ಗುರುತಿಸುತ್ತೇವೆ ಮತ್ತು ಅವರನ್ನು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರವೇ ಗಡಿಪಾರು ಮಾಡುತ್ತೇವೆ” ಎಂದು ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ
ಅಕ್ರಮ ವಲಸಿಗರ ಒಳನುಸುಳುವಿಕೆಯನ್ನು ತಡೆಗಟ್ಟಲು ಅಂತಾರಾಷ್ಟ್ರೀಯ ಗಡಿಗಳಲ್ಲಿ ಪರಿಣಾಮಕಾರಿಯಾಗಿ ಕಣ್ಗಾವಲು ಇರಿಸಲಾಗಿದೆ ಮತ್ತು ಬಹುಮುಖಿ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ಹೇಳಿದ ಮರು ದಿನವೇ ಶಾ ಈ ಹೇಳಿಕೆಯನ್ನು ಇಂದು ನೀಡಿದ್ದಾರೆ.
ಗಡಿ ಫೆನ್ಸಿಂಗ್, ಫ್ಲಡ್ ಲೈಟಿಂಗ್, ಗಡಿ ರಸ್ತೆಗಳ ನಿರ್ಮಾಣ ಮತ್ತು ಗಡಿ ಔಟ್ ಪೋಸ್ಟ್ ಸ್ಥಾಪನೆ ಮುಂತಾದ ಮೂಲಸೌಕರ್ಯಗಳನ್ನು ಗಡಿ ಪ್ರದೇಶಗಳಲ್ಲಿ ರಚಿಸಲಾಗಿದೆ ಎಂದು ಗೃಹ ಸಚಿವಾಲಯವು ನಿನ್ನೆ ಲೋಕಸಭೆಯಲ್ಲಿ ಲಿಖಿತ ಹೇಳಿಕೆಯನ್ನು ನೀಡಿದೆ.
ಗಡಿ ಕಾವಲು ಪಡೆಗಳು ನಿಯಮಿತವಾಗಿ ಗಸ್ತು ತಿರುಗುತ್ತಿವೆ ಮತ್ತು ವೀಕ್ಷಣಾ ಪೋಸ್ಟ್ಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಅಕ್ರಮ ಒಳನುಸುಳುವಿಕೆಯನ್ನು ತಡೆಯಲು ಆ್ಯಂಟಿ ಟನಲ್ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಆದರೂ, ಕೆಲವು ಅಕ್ರಮ ವಲಸಿಗರು ಇನ್ನೂ ರಹಸ್ಯವಾಗಿ ಭಾರತಕ್ಕೆ ಪ್ರವೇಶಿಸುವಲ್ಲಿ ಸಮರ್ಥರಾಗುತ್ತಿದ್ದಾರೆ, ಮುಖ್ಯವಾಗಿ ದೀರ್ಘ ಅಂತಾರಾಷ್ಟ್ರೀಯ ಗಡಿಗಳ ಕೆಲವು ಕಷ್ಟಕರವಾದ ಪರ್ವತ ಮತ್ತು ನದಿ ಭೂಪ್ರದೇಶಗಳಲ್ಲಿ ಇವರು ಒಳನುಸುಳುತ್ತಿದ್ದಾರೆ ಎನ್ನಲಾಗಿದೆ.
ಅಂತಹ ಅಕ್ರಮ ವಲಸಿಗರನ್ನು ಎದುರಿಸಲು, ವಿದೇಶಿಯರ ಕಾಯ್ದೆ 1946 ರ ಸೆಕ್ಷನ್ 3 ರ ಅಡಿಯಲ್ಲಿ ಕೇಂದ್ರ ಸರ್ಕಾರವು ಅಕ್ರಮ ವಿದೇಶಿ ಪ್ರಜೆಗಳನ್ನು ಬಂಧಿಸುವ ಮತ್ತು ಗಡಿಪಾರು ಮಾಡುವ ಕ್ರಮ ತೆಗೆದುಕೊಳ್ಳಲಿದೆ ಎಂದು ಸಚಿವಾಲಯ ಹೇಳಿದೆ.
ಪೌರತ್ವ ಕಾಯ್ದೆ, 1955 ಮತ್ತು ನಾಗರಿಕತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003 ರ ಅಡಿಯಲ್ಲಿ ಅಸ್ಸಾಂ ರಾಜ್ಯಕ್ಕೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳ ಅಡಿಯಲ್ಲಿ NRC 1951 ಅನ್ನು ನವೀಕರಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.