ನವದೆಹಲಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವಾಲಯವು ಏರೋಸ್ಪೇಸ್ ಎಂಜಿನಿಯರಿಂಗ್ ಮತ್ತು ಸ್ಮಾರ್ಟ್ ಎಗ್ರಿಕಲ್ಚರ್ ವಲಯದಲ್ಲಿ ಎರಡು ಹೊಸ ತರಬೇತಿ ಕಾರ್ಯಕ್ರಮಗಳನ್ನು ಇಂದು ಆರಂಭಿಸಲಿದೆ. ಜುಲೈ 15 ರಂದು ವರ್ಲ್ಡ್ ಯೂತ್ ಸ್ಕಿಲ್ ಡೇ ಹಿನ್ನಲೆಯಲ್ಲಿ ತರಬೇತಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಗುತ್ತಿದೆ.
ವಾಯುಪಡೆಯಲ್ಲಿ ಆಧುನೀಕರಣ ಮತ್ತು ನಾಗರಿಕ ವಿಮಾನಯಾನ ವಲಯದಲ್ಲಿ ಕ್ಷಿಪ್ರ ಪ್ರಗತಿಗಳು ಆಗುತ್ತಿರುವ ಹಿನ್ನಲೆಯಲ್ಲಿ ಈ ವಲಯಕ್ಕೆ ತರಬೇತು ಪಡೆದ ಸಿಬ್ಬಂದಿಗಳ ಅವಶ್ಯಕತೆ ಇದೆ. ಈ ವಲಯದಲ್ಲಿ ತರಬೇತಿ ನೀಡುವ ಕಾರ್ಯಕ್ರಮ ಜವಾಬ್ದಾರಿಯನ್ನು ಐಟಿಐ ನಾಗ್ಪುರ ವಹಿಸಲಿದೆ, ಪ್ರಮುಖ ಉತ್ಪಾದನಾ ಕೇಂದ್ರಗಳನ್ನು ಹೊಂದಿರುವ ಚೆನ್ನೈ ಮತ್ತು ಕೊಯಂಬತ್ತೂರುಗಳಲ್ಲಿ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಅದೇ ರೀತಿ, ಸ್ಮಾರ್ಟ್ ಎಗ್ರಿಕಲ್ಚರ್ ವಲಯಕ್ಕೂ ತರಬೇತಿ ಪಡೆದ ಸಿಬ್ಬಂದಿಗಳ ಅವಶ್ಯಕತೆ ಹೆಚ್ಚಾಗಿದೆ. ಮಣ್ಣಿನ ಪರೀಕ್ಷೆ, ನೀರಾವರಿ ನಿಯಂತ್ರಣ, ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಅಗ್ರಿಕಲ್ಚರ್ ಇನ್ ಪುಟ್ ಮತ್ತು ಅಗ್ರಿಕಲ್ಚರ್ ಸರ್ವಿಸ್ ನಿಯಂತ್ರಿತ ಪೂರೈಕೆ ಇತ್ಯಾದಿಗಳಿಗೆ ಕೌಶಳ್ಯಭರಿತ ಸಿಬ್ಬಂದಿಗಳ ಅವಶ್ಯಕತೆ ಇದೆ. ಹೀಗಾಗಿ ಈ ವಲಯದಲ್ಲಿ ತರಬೇತಿಯನ್ನು ನೀಡಲಿದೆ.
ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆಯ ಭಾಗವಾಗಿ ಕೌಶಲ್ಯಾಭಿವೃದ್ಧಿ ಸಚಿವಾಲಯವು ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದೆ.
ಜುಲೈ 15 ರಂದು ಪ್ರಾರಂಭವಾಗಲಿರುವ ಈ ಎರಡು ತರಬೇತಿ ಕಾರ್ಯಕ್ರಮಗಳು ಬಿಕಾಂ ಮತ್ತು ಅಪ್ಲೈಡ್ ಲಾಜಿಸ್ಟಿಕ್ಸ್ ಬಿಬಿಎ ಆಗಿದ್ದು, ಮೂರು ವರ್ಷದ ಕೋರ್ಸ್ ಆಗಿದೆ. ಇದರಡಿ ಅರ್ಧದಷ್ಟು ತರಗತಿ ಆಧಾರಿತ ಮತ್ತು ಇನ್ನೊಂದು ಅರ್ಧ ಲಾಜಿಸ್ಟಿಕ್ಸ್ ಕಂಪನಿಗಳಲ್ಲಿ ಪಠ್ಯಕ್ರಮ ಆಧಾರಿತ ತರಬೇತಿಯನ್ನು ನೀಡಲಾಗುತ್ತದೆ.
ವಿಶ್ವದ ಅತೀದೊಡ್ಡ ಶಾರ್ಟ್ ವೀಡಿಯೋ ವೇದಿಕೆ ಟಿಕ್ ಟಾಕ್ ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್ (NSDC) ಪರಸ್ಪರ ಕೈಜೋಡಿಸಿ ‘Skills4All’ ಆ್ಯಪ್ ಕ್ಯಾಂಪೇನ್ ಅನ್ನು ಆರಂಭಿಸುವ ಮೂಲಕ ‘ವರ್ಲ್ಡ್ ಯೂತ್ ಸ್ಕಿಲ್ ಡೇ 2019’ ಅನ್ನು ಆಚರಿಸಿದೆ.
ಭಾರತದಲ್ಲಿ ಸ್ಕಿಲ್ ಇಂಡಿಯಾ ಯೋಜನೆಯನ್ನು ಜಾರಿಗೆ ತಂದು ನಾಲ್ಕು ವರ್ಷಗಳಾಗಿವೆ. ನರೇಂದ್ರ ಮೋದಿಯವರ ಮೊದಲನೆಯ ಅವಧಿಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.