ಮಧುರೈ: ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ. ನಮ್ಮ ಜೀವನ ವಿಧಾನಕ್ಕೂ ವಯಸ್ಸಿಗೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ ತಮಿಳುನಾಡಿನ ಮಧುರೈ ನಿವಾಸಿ ಪಳನಿ. 93 ವರ್ಷದ ಅವರು, ಈಗಲೂ ಕುಸ್ತಿಪಟುಗಳಿಗೆ ಕುಸ್ತಿ ತಂತ್ರಗಳನ್ನು ಕಲಿಸುತ್ತಿದ್ದಾರೆ.
ಮಧುರೈನ ಪಲಂಗನಾಥಂನಲ್ಲಿ ಕುಸ್ತಿ ‘ಅಖಾಡ’ವನ್ನು ಹೊಂದಿರುವ ಅವರು, ಕುಸ್ತಿ ವಿದ್ಯೆಗಳನ್ನು ತಮ್ಮ ಶಿಷ್ಯರಿಗೆ ಹೇಳಿಕೊಡುತ್ತಿದ್ದಾರೆ. ಅವರೊಂದಿಗೆ ಸೇರಿ ತಾವೂ ನಿತ್ಯ ಕುಸ್ತಿ ಅಭ್ಯಾಸ ಮಾಡುತ್ತಾರೆ.
1994ರಲ್ಲಿ ಕುಸ್ತಿ ಅಖಾಡವನ್ನು ಸ್ಥಾಪನೆ ಮಾಡಿರುವ ಅವರು, ಯಾವುದೇ ಆಧುನಿಕ ಸಾಧನಗಳನ್ನು ಬಳಸದೆ ವ್ಯಾಯಾಮವನ್ನು ಮಾಡುತ್ತಾರೆ ಮತ್ತು ಇತರರಿಗೆ ಮಾಡಿಸುತ್ತಾರೆ.
ಕಳೆದ 75 ವರ್ಷಗಳಿಂದ ಅವರು ಕುಸ್ತಿಯನ್ನು ಕಲಿಸುತ್ತಾ ಬಂದಿದ್ದು, ಈಗ 93ರ ಪ್ರಾಯದಲ್ಲೂ ಅವರು ನಿತ್ಯ ಕುಸ್ತಿ, ವ್ಯಾಯಾಮವನ್ನು ಮಾಡುತ್ತಾರೆ ಮತ್ತು ಈ ಮೂಲಕ ತಮ್ಮ ಶಿಷ್ಯಂದಿರಿಗೆ ಸ್ಪೂರ್ತಿಯನ್ನು ತುಂಬಿಸುತ್ತಾರೆ.
ವಯಸ್ಸಾದವರಿಗೆ, ಮಕ್ಕಳಿಗೆ, ಯುವಕರಿಗೆ ಎಲ್ಲರಿಗೂ ಅವರು ಕುಸ್ತಿ ತಂತ್ರಗಾರಿಕೆಗಳನ್ನು ಕಲಿಸುತ್ತಾರೆ. ತಮ್ಮ ಬಳಿ ಕುಸ್ತಿ ಕಲಿಯಲು ಬಂದ ಯಾರೊಬ್ಬರನ್ನೂ ಅವರು ನಿರಾಶೆ ಮಾಡಿ ಕಳುಹಿಸುವುದಿಲ್ಲ.
“75 ವರ್ಷದಿಂದ ಕುಸ್ತಿ ಕಲಿಸುತ್ತಿದ್ದೇನೆ. ಈಗ ನನಗೆ 93 ವರ್ಷ ವಯಸ್ಸು. ಈ ವಯಸ್ಸಲ್ಲೂ ನನ್ನನ್ನು ನಾನು ಫಿಟ್ ಆಗಿ ಇಟ್ಟುಕೊಳ್ಳಲು ಮತ್ತು ನನ್ನ ಶಿಷ್ಯರಿಗೆ ಸ್ಪೂರ್ತಿ ತುಂಬಲು ಕುಸ್ತಿ ಮಾಡುತ್ತಿರುತ್ತೇನೆ” ಎಂದು ಪಳನಿ ಹೇಳುತ್ತಾರೆ.
ಇಳಿ ವಯಸ್ಸಿನಲ್ಲೂ ಕುಸ್ತಿ ಮಾಡುವ ಪಳನಿ ಅವರನ್ನು ಕಂಡು ಎಷ್ಟೋ ಯುವಕರು ಸ್ಪೂರ್ತಿ ಪಡೆದುಕೊಂಡಿದ್ದಾರೆ ಎಂದು ಸ್ಥಳಿಯರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.