ನವದೆಹಲಿ: ಫಾಕ್ಸ್ಕಾನ್ನ ಸ್ಥಳೀಯ ಘಟಕವು ಭಾರತದಲ್ಲಿ ನಿರ್ಮಾಣಗೊಂಡಿರುವ ಆ್ಯಪಲ್ ಇಂಕ್ನ ಉನ್ನತ ಮಟ್ಟದ ಐಫೋನ್ಗಳು ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಗಳನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದೆ. ದೇಶೀಯವಾಗಿ ಉತ್ಪಾದನೆಗೊಂಡ ಕಾರಣ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಟೆಕ್ ದೈತ್ಯ ಆ್ಯಪಲ್ನ ಐಫೋನ್ಗಳು ಕಡಿಮೆ ಬೆಲೆಗೆ ಮಾರಾಟವಾಗಲಿವೆ.
ಕೆಲವು ಅನುಮೋದನೆಗಳು ಬಾಕಿ ಉಳಿದಿವೆ, ಆದರೂ ಭಾರತದಲ್ಲಿ ಉತ್ಪಾದನೆಗೊಂಡ ಐಫೋನ್ ಎಕ್ಸ್ಆರ್ ಮತ್ತು ಐಫೋನ್ ಎಕ್ಸ್ಎಸ್ ಸಾಧನಗಳು ಆಗಸ್ಟ್ ವೇಳೆಗೆ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯ ಉತ್ಪಾದನೆಯನ್ನು ವಿಸ್ತರಿಸುವುದರಿಂದ ಆ್ಯಪಲ್ಗೆ ಪೂರ್ಣ ನಿರ್ಮಿತ ಸಾಧನಗಳ ಆಮದಿನ ಮೇಲೆ ವಿಧಿಸುವ ಹೆಚ್ಚಿನ ತೆರಿಗೆಯನ್ನು ಉಳಿಸಲು ಸಹಾಯವಾಗಲಿದೆ. ಜೊತೆಗೆ ಭಾರತದಲ್ಲಿ ತನ್ನದೇ ಆದ ರಿಟೇಲ್ ಸ್ಟೋರ್ಗಳನ್ನು ತೆರೆಯಲು ಸ್ಥಳೀಯ ಮೂಲದ ಮಾನದಂಡಗಳೂ ಅದಕ್ಕೆ ಸಿಗಲಿವೆ.
ಆ್ಯಪಲ್ ಸಾಧನಗಳು ಲಕ್ಷಾಂತರ ಭಾರತೀಯ ಅಪೇಕ್ಷೆಯ ಸಾಧನಗಳಾಗಿವೆ. ಆದರೆ ಅದರ ಬೆಲೆಯ ಕಾರಣಕ್ಕೆ ಅದು ಮಧ್ಯಮ ವರ್ಗದ ಭಾರತೀಯರಿಗೆ ಇನ್ನೂ ದೂರವಾಗಿಯೇ ಉಳಿದಿದೆ.
ಫಾಕ್ಸ್ಕಾನ್ ಎಂದು ಕರೆಯಲ್ಪಡುವ ಹೊನ್ ಹೈ ಪ್ರೆಸಿಷನ್ ಇಂಡಸ್ಟ್ರಿ ಕಾಂ.ನ ಸ್ಥಳೀಯ ಘಟಕವು ಈ ವರ್ಷ ತಮಿಳುನಾಡಿನಲ್ಲಿ ಐಫೋನ್ ಎಕ್ಸ್ ಫ್ಯಾಮಿಲಿ ಸಾಧನಗಳನ್ನು ಜೋಡಿಸಲು ಪ್ರಾರಂಭಿಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿತ್ತು. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಆ್ಯಪಲ್, ಬೆಂಗಳೂರಿನ ಟೆಕ್ ಹಬ್ನಲ್ಲಿರುವ ವಿಸ್ಟ್ರಾನ್ ಕಾರ್ಪ್ನ ಸ್ಥಳೀಯ ಘಟಕದ ಮೂಲಕ ಭಾರತದಲ್ಲಿ ಕಡಿಮೆ ಬೆಲೆಯ ಐಫೋನ್ ಎಸ್ಇ, ಐಫೋನ್ 6 ಎಸ್ ಮತ್ತು ಐಫೋನ್ 7 ಮಾದರಿಗಳನ್ನು ಕೂಡ ಜೋಡಿಸುತ್ತಿದೆ.
ಸ್ಥಳಿಯವಾಗಿ ತನ್ನ ಸಾಧನಗಳನ್ನು ಜೋಡಣೆ ಅಥವಾ ಉತ್ಪಾದನೆ ಮಾಡುವುದರಿಂದ ಆ್ಯಪಲ್ಗೆ ಅಪಾರ ಪ್ರಮಾಣದ ತೆರಿಗೆ ಹಣ ಉಳಿತಾಯವಾಗಲಿದೆ ಮತ್ತು ತನ್ನ ವಿತರಕರಿಗೆ ಸುಲಭವಾಗಿ ಸಾಧನಗಳನ್ನು ನೀಡಲು ಸಹಾಯಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.