ನವದೆಹಲಿ: ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಮಾತುಗಾರಿಕ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಭಾರತೀಯ ನಾಯಕನಾದ ಮೋದಿ ಅದ್ಭುತ ವ್ಯಕ್ತಿಯಾಗಿದ್ದು, ಅದ್ಭುತ ಮಾತುಗಾರನಾದ ಅವರಿಗೆ ಕೇಳುಗರನ್ನು ಅಂಗೈಯಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ.
“ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಭಾರತಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಒಬಾಮಾ ಮತ್ತು ಪ್ರಧಾನಿ ಮೋದಿಯವರು ಉದ್ಯಮಿ ಸಮುದಾಯದೊಂದಿಗೆ ಮಾತಿನ ವಿನಿಮಯ ಮಾಡಿಕೊಂಡ ನಂತರ, ನಾವು ಇಬ್ಬರು ನಾಯಕರ ಸಂಭಾಷಣೆಗೆ ಸಜ್ಜಾಗಿದ್ದ ಕೊಠಡಿಗೆ ತೆರಳಿದೆವು. ಅಲ್ಲಿ ಮೋದಿಯವರು ನಾನು ಅಲ್ಲಿಯವರೆಗೆ ಕೇಳದ ಅತ್ಯಂತ ಅದ್ಭುತವಾದ ಭಾಷಣವನ್ನು ಮಾಡಿದರು “ಎಂದು ನ್ಯಾನ್ಸಿ ಹೇಳಿಕೊಂಡಿದ್ದಾರೆ.
ಅವರು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಂ (ಯುಎಸ್ಐಎಸ್ಪಿಎಫ್) ಅಧ್ಯಕ್ಷ ಜಾನ್ ಚೇಂಬರ್ಸ್ ಅವರೊಂದಿಗೆ ಸಂಭಾಷಣೆಯನ್ನು ನಡೆಸಿದ ವೇಳೆ ಈ ಮಾತನ್ನು ಹೇಳಿದ್ದಾರೆ.
“ಮೋದಿ ಇಂಗ್ಲಿಷ್ ನಲ್ಲಿ ಮಾತನಾಡಿದ್ದರು. ಅದು ತುಂಬಾ ಸ್ಪೂರ್ತಿದಾಯಕ ಮಾತಾಗಿತ್ತು. ನಮ್ಮ ಭೂಮಿ ಮತ್ತು ಜನರ ಮೌಲ್ಯಗಳ ಬಗ್ಗೆ ಮಾತನಾಡಿದರು. ಆ ವಿಷಯದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಮೋದಿ ಮಾತನಾಡಿದ ರೀತಿ ಸಾಕಷ್ಟು ಅದ್ಭುತ ಮತ್ತು ವಿಭಿನ್ನವಾಗಿತ್ತು. ಆ ವಿಷಯದ ಬಗ್ಗೆ ನಮಗೆ ದೃಷ್ಟಿ, ಜ್ಞಾನ ಮತ್ತು ಕಾರ್ಯತಂತ್ರವಿರಬಹುದು, ಆದರೆ ಸಂದೇಶಗಳು ಕೂಡ ಬಹಳ ಮುಖ್ಯವಾಗುತ್ತದೆ ಮತ್ತು ಮೋದಿ ಅದರಲ್ಲಿ ಮಾಸ್ಟರ್ ಎನಿಸಿಕೊಂಡಿದ್ದಾರೆ. ಅವರು ಪ್ರೇಕ್ಷಕರನ್ನು ತನ್ನ ಅಂಗೈಯಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ” ಎಂದಿದ್ದಾರೆ.
ತನ್ನನ್ನು ತಾನು ಮಹಾತ್ಮ ಗಾಂಧಿಯ ಆರಾಧಕಿ ಎಂದು ಕರೆದುಕೊಂಡ ಆಕೆ, “ನಾನು ಶಾಲೆಯಲ್ಲಿ ಟೋಪಿ ಧರಿಸಿರುತ್ತಿದೆ, ನನ್ ಒಬ್ಬರು ಬಂದು ನನ್ನ ಬಳಿ “ನೀನು ಯಾರು ಎಂದು ನಿನ್ನನ್ನು ಅಂದುಕೊಂಡಿದ್ದೀಯಾ? ನೀನೇನು ಮಹಾತ್ಮ ಗಾಂಧಿಯೇ? ಎಂದು ಪ್ರಶ್ನಿಸಿದರು. ಆಗ ನನಗೆ ಅದರ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ನಾನು ಗ್ರಂಥಾಲಯಕ್ಕೆ ಹೋಗಿ ಮಹಾತ್ಮ ಗಾಂಧಿಯ ಪುಸ್ತಕಗಳನ್ನು ಹುಡುಕಲಾರಂಭಿಸಿದೆ ಮತ್ತು 1950 ರ ದಶಕದಲ್ಲಿ ಮಹಾತ್ಮ ಗಾಂಧಿಯವರ ಬಗ್ಗೆ ಸಾಕಷ್ಟು ಪುಸ್ತಕಗಳು ಇದ್ದವು. ಕಾಲೇಜಿನಲ್ಲಿ ನಾನು ಮಹಾತ್ಮ ಗಾಂಧಿಯವರ ಎಲ್ಲಾ ಪುಸ್ತಕಗಳನ್ನು ಓದುತ್ತಿದೆ, ಅವರ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದೇನೆ ಮತ್ತು ಈಗ ಸಂಪೂರ್ಣವಾಗಿ ಮಹಾತ್ಮ ಗಾಂಧಿಯವರ ಆರಾಧಕಿಯಾಗಿದ್ದೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.