ನವದೆಹಲಿ: ಈ ವರ್ಷದ ಜೂನ್ ತಿಂಗಳವರೆಗೆ ಜಮ್ಮು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನದ ವತಿಯಿಂದ 1299 ಕದನ ವಿರಾಮ ಉಲ್ಲಂಘನೆಗಳಾಗಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2018ರಲ್ಲಿ ಇದೇ ಅವಧಿಯಲ್ಲಿ 1629 ಕದನ ವಿರಾಮ ಉಲ್ಲಂಘನೆಗಳು ನಡೆದಿತ್ತು.
ಕೇಂದ್ರ ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಅವರು ಸೋಮವಾರ ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಮಾಹಿತಿಯನ್ನು, 2019ರ ಜನವರಿಯಿಂದ ಜೂನ್ವರೆಗೆ ಗಡಿಯಲ್ಲಿ ಪಾಕಿಸ್ಥಾನದಿಂದ 1299 ಕದನ ವಿರಾಮ ಉಲ್ಲಂಘನೆಗಳಾಗಿವೆ ಎಂದು ತಿಳಿಸಿದ್ದಾರೆ.
ಕದನ ವಿರಾಮ ಉಲ್ಲಂಘನೆಗೆ ಪ್ರತ್ಯುತ್ತರವನ್ನು ನೀಡುವುದು ಅಗತ್ಯವಾಗಿದ್ದು, ಭಾರತೀಯ ಸೇನೆಯು ತಕ್ಕ ರೀತಿಯಲ್ಲೇ ಪ್ರತ್ಯುತ್ತರವನ್ನು ನೀಡಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಕದನ ವಿರಾಮ ಉಲ್ಲಂಘನೆ ಹಾಗೂ ಅಕ್ರಮ ಒಳನುಸುಳುವಿಕೆಯ ವಿಷಯವನ್ನು ಪಾಕಿಸ್ಥಾನದ ಆಡಳಿತದೊಂದಿಗೆ ಪ್ರಸ್ತಾಪಿಸಲಾಗಿದೆ ಎಂದಿದ್ದಾರೆ.
ಹಾಟ್ಲೈನ್ಗಳು, ಧ್ವಜ ಸಭೆಗಳು, ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶನಾಲಯದ ಜನರಲ್ಗಳ ಮಾತುಕತೆ ಮತ್ತು ಉಭಯ ದೇಶಗಳ ನಡುವಣ ರಾಜತಾಂತ್ರಿಕ ಮಾರ್ಗಗಳ ಸ್ಥಾಪಿತ ಕಾರ್ಯವಿಧಾನದ ಮೂಲಕ ಕದನ ವಿರಾಮ ಉಲ್ಲಂಘನೆ, ಒಳನುಸುಳುವಿಕೆಗಳ ಬಗ್ಗೆ ಪಾಕಿಸ್ಥಾನ ಆಡಳಿಕ್ಕೆ ವಿಷಯ ಪ್ರಸ್ತಾಪಿಸಲಾಗುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.