ನವದೆಹಲಿ: ರೂ.50 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟುಗಳಿಗೆ ಇನ್ನು ಮುಂದೆ ಪ್ಯಾನ್ಕಾರ್ಡ್ಗಳ ಬದಲು ಆಧಾರ್ ಕಾರ್ಡ್ಗಳನ್ನು ಕೂಡ ಬಳಸಬಹುದಾಗಿದೆ. ಇದುವರೆಗೆ ರೂ.50 ಸಾವಿರಕ್ಕಿಂತ ಮೇಲ್ಪಟ್ಟ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿತ್ತು.
50,000 ರೂ.ಗಿಂತ ಹೆಚ್ಚಿನ ನಗದು ವಹಿವಾಟುಗಳಿಗೆ ಅಥವಾ ಪ್ಯಾನ್ ಕಡ್ಡಾಯವಾಗಿರುವ ಉಳಿದ ವಹಿವಾಟುಗಳಿಗ ಆಧಾರ್ ಕಾರ್ಡ್ ಸಂಖ್ಯೆಯನ್ನು ಇನ್ನು ಮುಂದೆ ನಮೂದಿಸಬಹುದು ಎಂದು ಕಂದಾಯ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಸ್ವೀಕರಿಸಲು ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳು ಬ್ಯಾಕ್ ಎಂಡ್ ನವೀಕರಣಗಳನ್ನು ಅಪ್ ಗ್ರೇಡ್ ಮಾಡಲಿವೆ ಎಂದು ಪಾಂಡೆ ಹೇಳಿದ್ದಾರೆ.
ಕಪ್ಪು ಹಣವನ್ನು ನಿಗ್ರಹಿಸುವ ಸಲುವಾಗಿ, ಹೋಟೆಲ್ ಅಥವಾ ಟ್ರಾವೆಲ್ ಬಿಲ್ಗಳಂತಹ ನಗದು ವಹಿವಾಟುಗಳಿಗೆ ಪ್ಯಾನ್ ಒದಗಿಸುವುದನ್ನು ಕಡ್ಡಾಯಗೊಳಿಸಲಾಯಿತು. 10 ಲಕ್ಷ ರೂ.ಗಿಂತ ಹೆಚ್ಚು ಸ್ಥಿರ ಆಸ್ತಿಯನ್ನು ಖರೀದಿಸಲು ಪ್ಯಾನ್ ಅಗತ್ಯವಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಂತಹ ಸಂದರ್ಭಗಳಲ್ಲಿ ಪ್ಯಾನ್ ಬದಲಿಗೆ ಆಧಾರ್ ಸಂಖ್ಯೆಯನ್ನು ಬಳಸಲು ಅನುಮತಿ ನೀಡುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಕೇಂದ್ರ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಇದರಿಂದ ಪ್ಯಾನ್ ಕಾರ್ಡ್ ಇಲ್ಲದವರಿಗೆ ಅಗತ್ಯಬಿದ್ದಾಗ ಆಧಾರ್ ಸಂಖ್ಯೆಯನ್ನು ನೀಡಲು ಇದು ಅವಕಾಶ ನೀಡುತ್ತದೆ ಎಂದು ಅವರು ಹೇಳಿದ್ದರು.
“ಇಂದು ನಮ್ಮ ಬಳಿ ಆಧಾರ್ ಕಾರ್ಡ್ಗೆ ಲಿಂಕ್ ಆದ 22 ಕೋಟಿ ಪ್ಯಾನ್ ಕಾರ್ಡ್ಗಳಿವೆ. ನಮ್ಮಲ್ಲಿ ಆಧಾರ್ ಹೊಂದಿರುವ 120 ಕೋಟಿಗೂ ಹೆಚ್ಚು ಜನರಿದ್ದಾರೆ. ಯಾರಾದರೂ ಪ್ಯಾನ್ ಕಾರ್ಡ್ ಮಾಡಲು ಬಯಸಿದರೆ ಅವರು ಆಧಾರ್ ಒದಗಿಸುವುದು ಕಡ್ಡಾಯ. ಹೀಗಾಗಿ ಈಗ ಪ್ಯಾನ್ ಬದಲು ಆಧಾರ್ ಅನ್ನೂ ವಹಿವಾಟುಗಳಿಗೆ ಬಳಕೆ ಮಾಡಬಹುದು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.