ನವದೆಹಲಿ: ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ 2019-20 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡನೆಗೊಳಿಸಿದ್ದು, ಎಲ್ಲಾ ವಲಯಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅತ್ಯುತ್ತಮವಾದ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಎರಡನೇಯ ಅವಧಿಯ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳನ್ನು ಈ ಬಜೆಟ್ ಸ್ಪಷ್ಟವಾಗಿ ವಿವರಿಸಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ ಕೇಂದ್ರ ಬಜೆಟ್ ಮಂಡಿಸುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ನಿರ್ಮಲಾ ಸೀತಾರಾಮನ್ ಪಾತ್ರರಾಗಿದ್ದಾರೆ. ಅವರು ಬಜೆಟ್ ಮಂಡಿಸುವುದನ್ನು ಸಂಸತ್ತಿನ ಗ್ಯಾಲರಿಯಲ್ಲಿ ಕುಳಿತು ಅವರ ಪೋಷಕರಾದ ಸಾವಿತ್ರಿ ಮತ್ತು ನಾರಾಯಣನ್ ಸೀತಾರಾಮನ್ ವೀಕ್ಷಣೆ ಮಾಡಿದರು.
ಜನರ ಭಾಗವಹಿಸುವಿಕೆಯೊಂದಿಗೆ ಟೀಂ ಇಂಡಿಯಾ ಆಗುತ್ತದೆ ಎಂದ ಅವರು, ಸರ್ಕಾರಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತೇವೆ. ಐದು ವರ್ಷದ ಹಿಂದೆ ಜಗತ್ತಿನಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಪ್ರಸ್ತುತ 5ನೇ ಸ್ಥಾನದಲ್ಲಿದೆ. ಬಲಿಷ್ಠ ದೇಶ, ಬಲಿಷ್ಠ ನಾಗರಿಕ ನಮ್ಮ ಗುರಿ ಎಂದು ಬಜೆಟ್ ಮಂಡನೆಯ ವೇಳೆ ಹೇಳಿದರು.
ಬಜೆಟ್ ಮಂಡನೆಯ ವೇಳೆ ಅವರು ಹೇಳಿದ ಪ್ರಮುಖ ಅಂಶಗಳು ಹೀಗಿವೆ.
⭕ ಮೂಲಸೌಕರ್ಯ, ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತೇವೆ.
⭕ ಭಾರತದಲ್ಲಿ 3 ಟ್ರಿಲಿಯನ್ ಆರ್ಥಿಕತೆ ಇತ್ತು. ಇದೀಗ ಕೆಲ ವರ್ಷಗಳಲ್ಲೇ 5 ಟ್ರಿಲಿಯನ್ ಆರ್ಥಿಕತೆ ಯೋಜನೆ ರೂಪಿಸಿದೆ. ನಾವು ದೇಶವನ್ನು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಿದ್ದೇವೆ.
⭕ ಸಾಗರ್ ಮಾಲಾ, ಭಾರತ್ ಮಾಲಾ ಮೂಲಕ ಸಾರಿಗೆ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದ್ದೇಚೆ. ಸಾರಿಗೆ ವೆಚ್ಚವನ್ನು ಕಡಿಮಗೊಳಿಸೋ ಉದ್ದೇಶದಿಂದ ಯೋಜನೆ ಆರಂಭಿಸಿದ್ದೇವೆ. ಗ್ರಾಮ ಹಾಗೂ ನಗರಗಳ ಅಂತರ ಕಡಿಮೆಗೊಳಿಸುವ ನಿಟ್ಟಿನಿಂದ ಸಾರಿಗೆ ಕಾಂತ್ರಿ ಮಾಡುತ್ತಿದ್ದೇವೆ.
⭕ 300 ಕಿ. ಮೀ. ಮೆಟ್ರೋ ಯೋಜನೆಗೆ ಅನುಮೋದನೆ ನೀಡಿದ್ದೇವೆ.
⭕ ಮುದ್ರಾ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ ಆಗುತ್ತಿದೆ.
⭕ ಉಡಾನ್ ಯೋಜನೆಯಿಂದ ಜನಸಾಮಾನ್ಯರ ಪಾಲಿಗೆ ಆಶಾಕಿರಣವಾಗಿದೆ.
⭕ ಸ್ಟ್ಯಾಂಡ್ ಅಪ್ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹಣದ ನೆರವು ನೀಡುತ್ತೇವೆ.
⭕ ನೂತನ 4 ಕಾರ್ಮಿಕ ಕೋರ್ಟ್ಗಳ ಸ್ಥಾಪನೆಗೆ ನಿರ್ಧಾರ, ಸ್ಟಾರ್ಟ್ ಅಪ್ ಯೋಜನೆಗಳ ಮಾಹಿತಿಗಾಗಿ ನೂತನ ವಾಹಿನಿ, ದೂರದರ್ಶನ ಸಹಭಾಗಿತ್ವದಲ್ಲಿ ನೂತನ ವಾಹಿನಿ ಕಾರ್ಯಾರಂಭ
⭕ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಪ್ರಾಧಿಕಾರ ನಿರ್ಮಾಣ. 10 ಲಕ್ಷ ಯುವಕರಿಗೆ ಕೌಲಶ್ಯ ಅಭಿವೃದ್ಧಿ ತರಬೇತಿ. 3ಡಿ ಪ್ರಿಂಟಿಂಗ್ ಅಧ್ಯಯನಕ್ಕೆ ಯುವಕರಿಗೆ ನೆರವು.
⭕ ಸ್ವಚ್ಛ ಭಾರತ್ ಯೋಜನೆಯಡಿ 9.6 ಕೋಟಿ ಶೌಚಾಲಯ ನಿರ್ಮಾಣ. ಗ್ರಾಮೀಣ ಪ್ರದೇಶದಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ.
⭕ ಭಾರತದ ಮೂರು ವಿದ್ಯಾಸಂಸ್ಥೆಗಳಿಗೆ ವಿಶ್ವ ಮಾನ್ಯತೆ: ಐಐಟಿ, ಐಐಎಂ. ಐಐಎಸ್ಸಿ ಸಂಸ್ಥೆಗಳಿಗೆ 400 ಕೋಟಿ ಅನುದಾನ, ವಿಶ್ವ ಮಟ್ಟದ ಶಿಕ್ಷಣ ಸಂಸ್ಥೆಗಳನ್ನಾಗಿಸಲು ಅನುದಾನ
⭕ ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ ಸ್ಥಾಪನೆ. ಶಿಕ್ಷಣ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು. ‘ಗ್ಯಾನ್’ ಯೋಜನೆ ಮೂಲಕ ಐಐಎಂ, ಐಐಟಿ, ಐಐಎಸ್ಸಿ ಜಂಟಿ ಅಧ್ಯಯನ.
⭕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏಕ ರೀತಿಯ ಜೀವನಕ್ಕೆ ಒತ್ತು ನೀಡಲಾಗುವುದು
⭕ ಸಬ್ ಅರ್ಬನ್ ರೈಲು ಯೋಜನೆಗಳಿಗೆ ಒತ್ತು. ಸರಕು ಸಾಗಣೆ ರೈಲುಗಳಿಗೆ ಪ್ರತ್ಯೇಕ ಟ್ರ್ಯಾಕ್ ನಿರ್ಮಾಣ. ಮೆಟ್ರೋ ರೈಲು ಉತ್ತೇಜಿಸಲು ಪಿಪಿಪಿ ಮಾದರಿ ಯೋಜನೆಗೆ ಒತ್ತು ನೀಡಲಾಗುವುದು.
⭕ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 81 ಲಕ್ಷ ಮನೆಗಳ ನಿರ್ಮಾಣ ಯೋಜನೆ. 26 ಲಕ್ಷ ಮನೆಗಳು ಈಗಾಗಲೆ ನಿರ್ಮಾಣವಾಗಿದೆ. 24 ಲಕ್ಷ ಕುಟುಂಬಗಳಿಗೆ ಸೂರು ಭಾಗ್ಯ. ನೂತನ ತಂತ್ರಜ್ಞಾನದಿಂದ ಆಧುನಿಕ ಮನೆ ನಿರ್ಮಾಣ ಮಾಡಲಾಗುವುದು.
⭕ ಜಲಶಕ್ತಿ ಸಚಿವಾಲಯ ಸ್ಥಾಪನೆ. ಜಲಸಂವರ್ಧನೆ, ಕುಡಿಯುವ ನೀರು ಯೋಜನೆಗೆ ಮೊದಲ ಆದ್ಯತೆ. ಹರ್ ಘರ್ ಜಲ್ ಯೋಜನೆ ಮೂಲಕ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಿದ್ದೇವೆ.
⭕ ಶೂನ್ಯ ಬಂಡವಾಳ ಕೃಷಿಗೆ ಹೆಚ್ಚಿನ ಆದ್ಯತೆ. ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ, ಕೃಷಿಕರಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ 10 ಸಾವಿರ ಹೊಸ ಕೃಷಿಕರ ಸಂಘ ಸ್ಥಾಪಿಸಲು ನಿರ್ಧಾರ ಮಾಡಿದ್ದೇವೆ.
⭕ ಸಾಂಪ್ರದಾಯಿಕ ಉದ್ದಿಮೆಗಳಿಗೆ ಉತ್ತೇಜನ ನೀಡಲು ನಿರ್ಧಾರ, ಜೇನು, ಬಿದಿರು ಖಾದಿ ಉದ್ಯಮಗಳಿಗೆ ಸರ್ಕಾರದ ಉತ್ತೇಜನ, ಪ್ರತಿ ವರ್ಷ 50 ಸಾವಿರ ಜನರಿಗೆ ನೆರವು ನೀಡಲಿದ್ದೇವೆ.
⭕ ಶೇ. 97 ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ಸೌಲಭ್ಯ, ಮುಂದಿನ ಐದು ವರ್ಷದಲ್ಲಿ 25 ಸಾವಿರ ಕಿ . ಮೀ. ರಸ್ತೆ ನಿರ್ಮಾಣ,1.25 ಲಕ್ಷ ಕಿ. ಮೀ. ರಸ್ತೆ ಮೇಲ್ದರ್ಜೆಗೇರಿಸಲು ನಿರ್ಧಾರ ಮಾಡಿದ್ದೇವೆ.
⭕ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಚಾಲನೆ ನೀಡಲಿದ್ದೇವೆ. ಪಿಎಂಜಿಎಸ್ ವೈ ಯೋಜನೆ ಗ್ರಾಮೀಣ ಜನರಲ್ಲಿ ಬದಲಾವಣೆ ತಂದಿದೆ.
⭕ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ 1.95 ಕೋಟಿ ಮನೆಗಳ ನಿರ್ಮಾಣಕ್ಕೆ ನಿರ್ಧಾರ, ಪ್ರತಿ ಮನೆಗೂ ಶೌಚಾಲಯ, ವಿದ್ಯುತ್, ಎಲ್ ಪಿಜಿ ಸೌಕರ್ಯ.
⭕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 24 ಸಾವಿರ ಕೋಟಿ ಬಿಡುಗಡೆ ಮಾಡಿದ್ದೇವೆ.
⭕ ಭಾರತದಲ್ಲಿ ಎಫ್ಡಿಐ ಹೂಡಿಕೆದಾರರನ್ನು ಆಕರ್ಷಿಸಲು ಕ್ರಮ. ವಿಮೆ ಕ್ಷೇತ್ರದಲ್ಲಿ ಶೇ. 100ರಷ್ಟು ಎಫ್ಡಿಐ ಹೂಡಿಕೆಗೆ ಅನುಮತಿ. ಉಳಿತಾಯ ಯೋಜನೆಗಳಿಗೆ ಜನರನ್ನು ಆಕರ್ಷಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ.
⭕ ಎಫ್ಡಿಐ ಹೂಡಿಕೆಗೆ ಈಗಲೂ ಭಾರತ ಪ್ರಮುಖ ಮಾರುಕಟ್ಟೆ. ಎಫ್ಡಿಐ 1.3 ಟ್ರಿಲಿಯನ್ ನಿಂದ 1.5 ಟ್ರಿಲಿಯನ್ ಗೆ ಏರಿಕೆ. ರೈಲು ಮೂಲಸೌಕರ್ಯ ಅಭಿವೃದ್ಧಿಗೆ 50 ಲಕ್ಷ ಕೋಟಿ ಅಗತ್ಯ, ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ. ಕಾರ್ಪೋರೇಟ್ ಬಾಂಡ್ ಕುರಿತು ಹೊಸ ನೀತಿ ಜಾರಿಗೆ ನಿರ್ಧಾರ: ಎಫ್ ಟಿಐ ಉತ್ತೇಜಿಸಲು ಕೆವೈಸಿ ನೀತಿಯ ಸರಳೀಕರಣ ಮಾಡಲಿದ್ದೇವೆ.
⭕ ಪ್ರಧಾನಮಂತ್ರಿ ‘ಕರ್ಮಯೋಗಿ ಮಾನ್ ಸಮ್ಮಾನ್’ ಯೋಜನೆಗೆ ಚಾಲನೆ. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪೆನ್ಶನ್ ನೀಡುತ್ತಿದ್ದೇವೆ.
⭕ ಪ್ರತಿಯೊಬ್ಬರಿಗೂ ವಸತಿ ಕಲ್ಪಿಸುವುದು ಕೇಂದ್ರ ಸರ್ಕಾರದ ಕರ್ತವ್ಯ. ಅದಕ್ಕಾಗಿ 350 ಕೋಟಿ ರು. ಎಂಎಸ್ಎಂಇಗಳಿಗೆ ಸಾಲ ನೀಡಿದ್ದೇವೆ.
⭕ ಹೆಚ್ಚಿನ ಗೃಹ ನಿರ್ಮಾಣಕ್ಕೆ ಆದ್ಯತೆ, ಎಂಎಸ್ಎಂಇಗಳಿಗೆ 350 ಕೋಟಿ ಸಾಲ ನೀಡಿಕೆ: ಎಂಸ್ಎಂಇಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಸೌಲಭ್ಯ ನೀಡುತ್ತೇವೆ.
⭕ ‘ಒನ್ ನೇಶನ್ ಒನ್ ಗ್ರಿಡ್’ ಮೂಲಕ ವಿದ್ಯುತ್ ಸೌಕರ್ಯ. ಗ್ಯಾಸ್ ಗ್ರಿಡ್, ವಾಟರ್ ಗ್ರಿಡ್ ನಿರ್ಮಾಣಕ್ಕೆ ನಿರ್ಧರಿಸಿದ್ದೇವೆ.
⭕ ಜಲಮಾರ್ಗ ಯೋಜನೆಗೆ ಒತ್ತು. ಗಂಗಾನದಿಯಲ್ಲಿ ಒಳನಾಡು ಜಲಸಾರಿಗೆಗೆ ಆಧ್ಯತೆ. ಸರಕು ಸಾಗಣೆಗೆ ಅನುಕೂಲಕಾರಿ ವಾತಾವರಣ ನಿರ್ಮಾಣ ಮಾಡುತ್ತೇವೆ.
⭕ ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ಧನ ಘೋಷಣೆ, ಮುಂದಿನ 3 ವರ್ಷಕ್ಕೆ 10 ಸಾವಿರ ಕೋಟಿ ಪ್ರೋತ್ಸಾಹ ಧನ, ಎಲೆಕ್ಟ್ರಿಕ್ ವಾಹನಗಳ ಮೂಲಕ ಪರಿಸರ ಪ್ರೇಮಿ ವಾಹನ ವ್ಯವಸ್ಥೆ ನಿರ್ಮಾಣ ಮಾಡುತ್ತೇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.