ಅಹ್ಮದಾಬಾದ್ : ವಾರ್ಷಿಕ ಜಗ್ನನಾಥ ರಥಯಾತ್ರೆ ಗುರುವಾರ ಬೆಳಿಗ್ಗೆ ಆರಂಭಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಸೇರಿದಂತೆ ಅನೇಕ ಗಣ್ಯರು ವಾರ್ಷಿಕ ರಥಯಾತ್ರೆಗೆ ಶುಭಾಶಯಗಳನ್ನು ಕೋರಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿ, “ರಥಯಾತ್ರೆಯ ಶುಭ ಸಂದರ್ಭದಲ್ಲಿ ಸಮಸ್ತ ನಾಗರಿಕರಿಗೆ ಶುಭಾಶಯಗಳು. ಭಗವಾನ್ ಜಗನ್ನಾಥನ ಆಶೀರ್ವಾದ ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ” ಎಂದಿದ್ದಾರೆ.
Greetings and good wishes to fellow citizens on the auspicious occasion of Rath Yatra. May the blessings of Lord Jagannath bring peace, happiness and prosperity to everyone’s lives #PresidentKovind
— President of India (@rashtrapatibhvn) July 4, 2019
ಟ್ವಿಟ್ ಮಾಡಿರುವ ಮೋದಿ, “ರಥಯಾತ್ರೆಯ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು. ಭಗವಾನ್ ಜಗನ್ನಾಥನನ್ನು ಪ್ರಾರ್ಥಿಸುತ್ತೇನೆ ಮತ್ತು ಪ್ರತಿಯೊಬ್ಬರಿಗೂ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸು ಎಂದು ಆಶೀರ್ವಾದವನ್ನು ಕೋರುತ್ತೇನೆ. ಜೈ ಜಗನ್ನಾಥ್” ಎಂದಿದ್ದಾರೆ.
Best wishes to everyone on the special occasion of the Rath Yatra.
We pray to Lord Jagannath and seek his blessings for the good health, happiness and prosperity of everyone.
Jai Jagannath. pic.twitter.com/l9v36YlUQ5
— Narendra Modi (@narendramodi) July 4, 2019
ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ಅವರ ಪತ್ನಿ ಸೋನಲ್ ಶಾ ಅವರು ಇದರಲ್ಲಿ ಭಾಗಿಯಾಗಿದರು. 450 ವರ್ಷಗಳ ಹಿಂದಿನ ಗುಜರಾತಿನ ಅಹ್ಮದಾಬಾದ್ ಜಗ್ನನಾಥ ದೇಗುಲದ ಮಂಗಳ ಆರತಿಯಲ್ಲಿ ಭಾಗಿಯಾಗಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
श्री जगन्नाथ रथ यात्रा के पावन अवसर पर अहमदाबाद के जगन्नाथ मंदिर में मंगला आरती की और महाप्रभु का आशीर्वाद लिया।
जय जगन्नाथ 🙏 pic.twitter.com/eXS3m1Ze3i— Amit Shah (@AmitShah) July 4, 2019
ಗುಜರಾತ್ ಜಗ್ನನಾಥ ರಥಯಾತ್ರೆ ಮತ್ತು ವಿಶ್ವಪ್ರಸಿದ್ಧ ಪುರಿ ಜಗ್ನನಾಥ ರಥಯಾತ್ರೆ, ಕೋಲ್ಕತ್ತಾದ ಇಸ್ಕಾನ್ ರಥಯಾತ್ರೆಗಳು ಒಂದೇ ಅವಧಿಯಲ್ಲಿ ಜರುಗುತ್ತವೆ.
‘ರಥ ಯಾತ್ರೆ’ ಯು ವಾರ್ಷಿಕ ರಥ ಉತ್ಸವವಾಗಿದ್ದು, ನಂದಿಗೋಸ (ಭಗವಾನ್ ಜಗನ್ನಾಥ್), ತಲಾದ್ವಜ (ಭಗವಾನ್ ಬಾಲಭದ್ರ) ಮತ್ತು ದರ್ಪದಾಲನ್ (ದೇವಿ ಸುಭದ್ರಾ) ಎಂಬ ಮೂರು ದೇವರ ವಾರ್ಷಿಕ ಪ್ರಯಾಣವನ್ನು ಸಾಂಕೇತಿಸುತ್ತದೆ. 12 ನೇ ಶತಮಾನದಿಂದಲೂ ಜಗನ್ನಾಥ ದೇವಾಲಯದಿಂದ ದೇವಿ ಗುಂಡಿಚ ದೇವಾಲಯದವರೆಗೆ ರಥಯಾತ್ರೆ ಸಾಗುತ್ತದೆ. ಗುಂಡಿಚ ಈ ಮೂರು ದೇವತೆಗಳ ಚಿಕ್ಕಮ್ಮ ಎಂಬ ಪ್ರತೀತಿ ಇದೆ. ದೇವತೆಗಳನ್ನು ಮರದ ಮೂರು ದೈತ್ಯ ರಥಗಳಲ್ಲಿ ಇರಿಸಲಾಗುತ್ತದೆ, ಇದನ್ನು ಭಕ್ತರು ಎಳೆಯುತ್ತಾರೆ. ಆಚರಣೆಯು ಬಹುದಯಾತ್ರೆಯೊಂದಿಗೆ ಅಥವಾ ಮೂರು ದೇವತೆಗಳ ವಾಪಾಸ್ ಆಗಮನದೊಂದಿಗೆ ಸಮಾಪ್ತಿಗೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.