ನವದೆಹಲಿ: ಭಾರತೀಯ ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ತನ್ನ ಶೇ. 40 ರಷ್ಟು ಡೆಲಿವರಿ ವೆಹ್ಹಿಕಲ್ಗಳನ್ನು ಎಲೆಕ್ಟ್ರಿಕ್ ವೆಹ್ಹಿಕಲ್ಗಳಾಗಿ ಬದಲಾಯಿಸುವುದಾಗಿ ಪ್ರಕಟಿಸಿದೆ. ಇದಕ್ಕಾಗಿ 2019 ರ ಅಂತ್ಯದ ವೇಳೆಗೆ ಅದು 160 ಎಲೆಕ್ಟ್ರಿಕ್ ವ್ಯಾನ್ಗಳನ್ನು ಪರಿಚಯಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲೆಕ್ಟ್ರಿಕ್ ವೆಹ್ಹಿಕಲ್ ಮೂಲಕ ಟ್ರಯಲ್ ಡೆಲಿವರಿಯನ್ನು ಮಾಡುತ್ತಿದ್ದು, ಅದು ಯಶಸ್ಸನ್ನೂ ಕಾಣುತ್ತಿದೆ.
ಕಳೆದ ಆರು ತಿಂಗಳುಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮೂಲಕ ಟ್ರಯಲ್ ಡೆಲಿವರಿಯನ್ನು ಅದು ಮಾಡುತ್ತಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಸ್ಪಂದನೆಗಳು ವ್ಯಕ್ತವಾಗಿವೆ ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವೆಹ್ಹಿಕಲ್ ನಿಯೋಜನೆಗೆ ಅನುಕೂಲವಾಗುವಂತೆ ಮತ್ತು ಅದರ ಕಾರ್ಯಾಚರಣೆಗಳಿಗೆ ಯಾವುದೇ ಅಡೆತಡೆಗಳು ಇಲ್ಲದಂತೆ ತನ್ನ ಹಬ್ಗಳಲ್ಲಿ ಅಗತ್ಯವಾದ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುತ್ತಿದ್ದೇವೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.
ಪರಿಸರಕ್ಕೆ ಪೂರಕವಾದ ಹಾಗೂ ನಾಗರಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಫ್ಲಿಪ್ ಈ ಹೊಸ ಪ್ರಯತ್ನಕ್ಕೆ ಕೈಹಾಕಿದೆ.
ಕಂಪನಿಯು ಬೆಂಗಳೂರಿನಲ್ಲಿ ಒಟ್ಟು 30 ಇ-ಬೈಕ್ಗಳನ್ನು, ಹೈದರಾಬಾದ್ನಲ್ಲಿ ಎಂಟು ಇ-ವ್ಯಾನ್ಗಳನ್ನು ಮತ್ತು ನವದೆಹಲಿಯಲ್ಲಿ 10 ಇ-ವ್ಯಾನ್ಗಳನ್ನು ನಿಯೋಜಿಸಿದೆ. ಇಂತಹ ಪ್ರಯತ್ನಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ಶೇಕಡಾ 50ರಷ್ಟು ಕಡಿತಗೊಳಿಸಲು ಸಾಧ್ಯವಾಗುತ್ತದೆ ಎಂದು ಫ್ಲಿಪ್ಕಾರ್ಟ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.