ನವದೆಹಲಿ: ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಗುರುವಾರ ನವದೆಹಲಿಯಲ್ಲಿ ರಾಜ್ಯಗಳ ಆಹಾರ ಕಾರ್ಯದರ್ಶಿಗಳು, ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಭಾರತೀಯ ಆಹಾರ ನಿಗಮ (ಎಫ್ಸಿಐ), ಕೇಂದ್ರ ಉಗ್ರಾಣ ನಿಗಮ (ಸಿಡಬ್ಲ್ಯೂಸಿ) ಮತ್ತು ರಾಜ್ಯ ಉಗ್ರಾಣ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಪ್ರತಿಯೊಂದು ದಾಖಲೆಗಳ ಕಂಪ್ಯೂಟರೈಝೇಶನ್ ಅನ್ನು ಉತ್ತೇಜಿಸುವುದು, ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಎಲ್ಲಾ ಎಫ್ಸಿಐ ಡಿಪೋಗಳನ್ನು, ಸಿಡಬ್ಲ್ಯೂಸಿ ಮತ್ತು ಎಸ್ಡಬ್ಲ್ಯೂಸಿ ಡಿಪೋಗಳನ್ನು ಡಿಪೋ ಆನ್ಲೈನ್ ಸಿಸ್ಟಮ್ (DOS)ನೊಂದಿಗೆ ಸೇರಿಸುವುದಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಪಾಸ್ವಾನ್ ಚರ್ಚಿಸಿದರು.
“ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಮಾಡಿದ ಕಾರ್ಯಗಳು ಬಹಳ ಮುಖ್ಯವಾದುವುಗಳು ಮತ್ತು ಇದು ಬಹುತೇಕ ಫಲಾನುಭವಿಗಳಿಗೆ ಜೀವಸೆಲೆಯಾಗಿದೆ. ಇದರಲ್ಲಿ ಎಫ್ಸಿಐ, ಸಿಡಬ್ಲ್ಯೂಸಿ, ಎಸ್ಡಬ್ಲ್ಯುಸಿ, ಮತ್ತು ಖಾಸಗಿ ಗೋದಾಮುಗಳಲ್ಲಿ ಸಂಗ್ರಹವಾಗುವ 612 ಲಕ್ಷ ಟನ್ ಆಹಾರ ಧಾನ್ಯಗಳನ್ನು ವಾರ್ಷಿಕವಾಗಿ 81 ಕೋಟಿ ಫಲಾನುಭವಿಗಳಲ್ಲಿ ವಿತರಿಸಲಾಗುತ್ತದೆ” ಎಂದರು.
ಈ ಸಭೆಯಲ್ಲಿ ತೆಗೆದುಕೊಳ್ಳಲಾದ ಪ್ರಮುಖ ನಿರ್ಧಾರವೆಂದರೆ ಒನ್ ನೇಷನ್ ಒನ್ ರೇಷನ್ ಕಾರ್ಡ್. ಎಲ್ಲಾ ಫಲಾನುಭವಿಗಳಿಗೆ ಅದರಲ್ಲೂ ವಿಶೇಷವಾಗಿ ವಲಸಿಗರು ದೇಶದ ಯಾವುದೇ ಪಿಡಿಎಸ್ (ರೇಷನ್ ಅಂಗಡಿ) ಅಂಗಡಿಯಿಂದ ಪಡಿತರವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಇದನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಇದು ಅಂಗಡಿ ಮಾಲೀಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಭ್ರಷ್ಟಾಚಾರವನ್ನು ಮೊಟಕುಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
आज नई दिल्ली में खाद्य सुरक्षा मुद्दों पर राज्य के खाद्य सचिवों के साथ बैठक में शामिल हुए। pic.twitter.com/nF7ArDcQOp
— Ram Vilas Paswan (@irvpaswan) June 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.