ಒಸಕಾ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಅಲ್ಲಿನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭೂತಪೂರ್ವ ಯಶಸ್ಸಿಗೆ ಅನಿವಾಸಿ ಭಾರತೀಯರ ಕೊಡುಗೆಯೂ ಇದೆ ಎಂದರು.
“7 ತಿಂಗಳ ನಂತರ ಮತ್ತೊಮ್ಮೆ ಇಲ್ಲಿಗೆ ಬರಲು ನಾನು ಅದೃಷ್ಟ ಮಾಡಿದ್ದೇನೆ. ಕಳೆದ ಬಾರಿ ನಾನು ಇಲ್ಲಿಗೆ ಬಂದಾಗ ಇಲ್ಲಿನ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು ಮತ್ತು ನೀವು ನನ್ನ ಸ್ನೇಹಿತ ಶಿಂಜೋ ಅಬೆ ಮೇಲೆ ಮತ್ತೊಮ್ಮೆ ಭರವಸೆಯನ್ನು ಪ್ರದರ್ಶಿಸಿದ್ದೀರಿ. ನಾನು ಇಂದು ಇಲ್ಲಿದ್ದೇನೆ ಮತ್ತು ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ತನ್ನ ಪ್ರಧಾನ ಸೇವಕನ ಮೇಲೆ ಅತೀದೊಡ್ಡ ಭರವಸೆಯನ್ನು ಪ್ರದರ್ಶಿಸಿದೆ” ಎಂದಿದ್ದಾರೆ.
ಚೀನಾವನ್ನು ಹೊರತುಪಡಿಸಿದರೆ, 61 ಕೋಟಿ ಮತದಾರರು ವಿಶ್ವದ ಎಲ್ಲಾ ದೇಶಗಳ ಜನಸಂಖ್ಯೆಗಿಂತಲೂ ಹೆಚ್ಚು. ಇತಿಹಾಸದ ಯಾವ ಚುನಾವಣೆಯೂ ಇಷ್ಟೊಂದು ಅಭೂತಪೂರ್ವವಾಗಿ ನಡೆದಿಲ್ಲ. 130 ಕೋಟಿ ಜನರು ಹಿಂದೆಂದಿಗಿಂತಲೂ ಬಲಿಷ್ಠ ಸರ್ಕಾರದ ರಚನೆ ಮಾಡಿದರು ಎಂದರು.
ಭಾರತದ ರೇಷ್ಮೇ ದಾರಗಳನ್ನು ಜಪಾನಿನ ಕೈಟೋ ಫೆಸ್ಟಿವಲ್ನಲ್ಲಿ ಬಳಕೆ ಮಾಡಲಾಗುತ್ತದೆ. ಭಾರತದ ಧ್ಯಾನವನ್ನು ಜಪಾನಿನಲ್ಲಿ ಝೆನ್ ಎಂದು ಕರೆಯಲಾಗುತ್ತದೆ. ಭಾರತದ ಸೇವೆಯೂ ಜಪಾನಿನ ಸೇವೆಯ ಅರ್ಥವನ್ನೇ ನೀಡುತ್ತದೆ ಎಂದರು.
ವಿಶ್ವದೊಂದಿಗೆ ಭಾರತದ ಬಾಂಧವ್ಯವನ್ನು ಗಮನಿಸಿದರೆ, ಜಪಾನ್ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಜಪಾನಿನ ಹೆಜ್ಜೆ ಗುರುತು ಇಲ್ಲದ ಯಾವ ಯೋಜನೆಯೂ ಭಾರತದಲ್ಲಿ ಇಲ್ಲ. ಎರಡನೇ ವಿಶ್ವಯುದ್ಧದ ಬಳಿಕ ಜಪಾನ್ ಮತ್ತು ಭಾರತದ ಸಂಬಂಧ ಮತ್ತಷ್ಟು ಗಟ್ಟಿಗೊಂಡಿತು ಎಂದಿದ್ದಾರೆ.
ಅನಿವಾಸಿ ಭಾರತೀಯರ ‘ಮೋದಿ ಮೋದಿ’ ಘೋಷ ಮುಗಿಲು ಮುಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.