ಪುಣೆ: ಹಸಿರು ಯೋಜನೆಯ ಭಾಗವಾಗಿ ಪಂಡರೀಪುರದ ವಾರ್ಷಿಕ ಮೆರವಣಿಗೆಯಾದ ‘ವಾರಿ’ ಸಾಗುವ ಮಾರ್ಗಗಳಲ್ಲಿ ಬರುವ ಕಾಲೇಜುಗಳ ಸುತ್ತಲೂ ಗಿಡಗಳನ್ನು ನೆಡುವ ಸಲುವಾಗಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ (ಎಸ್ಪಿಪಿಯು) ಭಾನುವಾರ 16000 ಕ್ಕೂ ಹೆಚ್ಚು ಸಸಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದೆ.
ಅತಿದೊಡ್ಡ ಸಂಖ್ಯೆಯ ಸಸಿಗಳ ವಿತರಣೆಯಲ್ಲಿ ಈ ಕಾರ್ಯ ವಿಶ್ವ ದಾಖಲೆಯಾಗಲಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಸಮ್ಮುಖದಲ್ಲಿ “ಹಸಿರು ವಾರಿ ಯೋಜನೆ” ಯ ಭಾಗವಾಗಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕವು ಸಸಿಗಳನ್ನು ವಿತರಣೆ ಮಾಡಿದೆ.
15000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಫಡ್ನವೀಸ್ ಅವರು, ವಾರಿ ಮೂಲಕ ಸ್ವಚ್ಛತೆ, ಆರೋಗ್ಯ, ನೈರ್ಮಲ್ಯ ಮತ್ತು ಪರಿಸರದ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
“ಈ ಎಲ್ಲಾ ಸಸಿಗಳನ್ನು ವಾರಿ ಸಾಗುವ ಮಾರ್ಗಗಳ ಇಕ್ಕೆಲಗಳಲ್ಲಿರುವ ಯೂನಿವರ್ಸಿಟಿ, ಕಾಲೇಜುಗಳ ಸುತ್ತಮುತ್ತ ವಿದ್ಯಾರ್ಥಿಗಳು ನೆಡಲಿದ್ದಾರೆ. ನೆಟ್ಟ ಸಸಿಗಳು ಬೆಳೆದು ದೊಡ್ಡದಾಗುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಎಲ್ಲಾ ಕಾಲೇಜುಗಳು ಮತ್ತು ಅದರ ವಿದ್ಯಾರ್ಥಿಗಳಿಗೆ ನೀಡಲಾಗಿದೆ” ಎಂದು ಎಸ್ಪಿಸಿ ಅಧಿಕಾರಿ ಹೇಳಿದ್ದಾರೆ.
ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಸೋಲಾಪುರ ಜಿಲ್ಲೆಯ ಪಂಡರೀಪುರಕ್ಕೆ ಸಾಗುವ ವಿಠ್ಠಲನ ಭಕ್ತರ ವಾರ್ಷಿಕ ಮೆರವಣಿಗೆಯೇ ‘ವಾರಿ’.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.