ಸೂರತ್: ಮಹಾತ್ಮ ಗಾಂಧಿಯವರ ‘ಶುಚಿತ್ವವೇ ದೈವತ್ವ” ಮತ್ತು ‘ಸ್ವಚ್ಛ ಭಾರತ-ಹಸಿರು ಭಾರತ’ದ ಗುರಿಯನ್ನು ಸಾಧಿಸಲು, ಸೂರತ್ನ ಯುವ ಉದ್ಯಮಿಯೊಬ್ಬರು ಗುಜರಾತ್ನ ಸೂರತ್ ಜಿಲ್ಲೆಯ ಉಧಾನ ಪಟ್ಟಣದಲ್ಲಿರುವ ರೈಲ್ವೆ ನಿಲ್ದಾಣವನ್ನು ಭಾರತದ ಮೊದಲ ಹಸಿರು ರೈಲ್ವೆ ನಿಲ್ದಾಣವನ್ನಾಗಿ ಪರಿವರ್ತಿಸುವ ಕಾರ್ಯವನ್ನು ಪ್ರಾರಂಭಿಸಿದ್ದಾರೆ.
ವಿರಳ್ ಸುಧಿರ್ಭಾಯ್ ದೇಸಾಯಿ ಅವರು ಉಧಾನ ರೈಲ್ವೆ ನಿಲ್ದಾಣವನ್ನು ಹಸಿರು ಮತ್ತು ಮಾಲಿನ್ಯ ಮುಕ್ತವಾಗಿ ಪರಿವರ್ತಿಸಿ ಮುಂಬಯಿಯ ಛತ್ರಪತಿ ಶಿವಾಜಿ ರೈಲು ನಿಲ್ದಾಣದ ಮಾದರಿಗೆ ತರಲು ಪ್ರಯತ್ನಿಸುತ್ತಿದ್ದಾರೆ.
ಈ ಉದಾತ್ತ ಕಾರ್ಯಕ್ಕಾಗಿ, ದೇಸಾಯಿ ಅವರಿಗೆ ಚಡ್ಯೋ ಮತ್ತು ಆರ್ಕ್ರೋಮಾ ಸಂಸ್ಥೆಗಳಂತಹ ವಿವಿಧ ಸಂಸ್ಥೆಗಳಿಂದ ಮತ್ತು ನಿಲ್ದಾಣದ ನಿರ್ದೇಶಕರಾದ ಸಿ.ಆರ್ ಗರುಡರಿಂದ ಬೆಂಬಲ ದೊರೆತಿದೆ.
ಉಧಾನ ರೈಲ್ವೆ ನಿಲ್ದಾಣವನ್ನು ಸ್ವಚ್ಛವಾಗಿ ಮತ್ತು ಹಸಿರಾಗಿಸಲು ದೇಸಾಯಿಯವರು, ರೈಲ್ವೆ ನಿಲ್ದಾಣದಲ್ಲಿ ಆಕ್ಸಿಜನ್ ಬಾಂಬರ್ ಮತ್ತು 1700 ಕ್ಕೂ ಹೆಚ್ಚು ವಾಯು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿದ್ದಾರೆ. ಇದರೊಂದಿಗೆ, ಪರಿಸರವನ್ನು ಪೋಷಿಸುವ ಮತ್ತು ರಕ್ಷಿಸುವ ಸಂದೇಶಗಳನ್ನು ನಿಲ್ದಾಣದ ಗೋಡೆಗಳ ಮೇಲೆ ಬರೆಸಿದ್ದಾರೆ. ಇದನ್ನು ವಿಶೇಷ “ಪರಿಸರ ಸಂರಕ್ಷಣಾ ಗೀಚುಬರಹ” ದಿಂದ ಚಿತ್ರಿಸಲಾಗಿದೆ.
ಇದಲ್ಲದೆ, ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಲು ನಿಲ್ದಾಣದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ ಮತ್ತು ಹುತಾತ್ಮರ ಹೆಸರಿನಲ್ಲಿ ಗಿಡಗಳನ್ನು ನೆಡಲಾಗಿದೆ.
ದೇಸಾಯಿ ಅವರು ತಮ್ಮ ಕಾರನ್ನು ಹಸಿರು ಹುಲ್ಲಿನಿಂದ ಅಲಂಕರಿಸಿದ್ದಾರೆ, ಈ ಮೂಲಕ ಇತರರಿಗೂ ಹಸಿರಿಗೆ ಮರಳುವಂತೆ ಪ್ರೇರೇಪಿಸುತ್ತಿದ್ದಾರೆ.
“ನಾನು ಕಳೆದ ಹಲವಾರು ವರ್ಷಗಳಿಂದ ಪರಿಸರ ಮತ್ತು ಇಂಧನ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೇನೆ ಮತ್ತು ಅನೇಕ ಪರಿಸರ ಸಮಸ್ಯೆಗಳ ಬಗ್ಗೆ ಸರ್ಕಾರ ಮತ್ತು ಜನರಿಗೆ ಅರಿವು ಮೂಡಿಸಲು ನಾನು ಪ್ರಯತ್ನಿಸುತ್ತೇನೆ” ಎಂದು ದೇಸಾಯಿ ಹೇಳುತ್ತಾರೆ.
“ಮರಗಳನ್ನು ಕಡಿಯುವುದರಿಂದ ಪರಿಸರದ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಈ ಭೂಮಿಯನ್ನು ಪುನಃ ಚೈತನ್ಯಗೊಳಿಸುವುದು ನಮ್ಮ ಜವಾಬ್ದಾರಿ. ಗೋ ಗ್ರೀನ್ನ ದೃಷ್ಟಿಯಿಂದ ನಾನು ಅಭಿಯಾನವನ್ನು ಪ್ರಾರಂಭಿಸಿದ್ದೇನೆ” ಎಂದಿದ್ದಾರೆ. ವಿರಳ್ ದೇಸಾಯಿ ಮತ್ತು ಅವರ ಸಂಸ್ಥೆ ‘ಹಾರ್ಟ್ಸ್ ಅಟ್ ವರ್ಕ್ ಫೌಂಡೇಶನ್’ ಗಿಡ ನೆಡುವಿಕೆ ಮತ್ತು ಪರಿಸರ ಸಂರಕ್ಷಣೆಗಾಗಿ ಜನರನ್ನು ಪ್ರೋತ್ಸಾಹಿಸಲು ನಿರಂತರ ಕೆಲಸ ಮಾಡುತ್ತಾ ಬರುತ್ತಿದೆ.
ದೇಸಾಯಿ ಅವರ ಕ್ಲೀನ್ ಇಂಡಿಯಾ, ಗ್ರೀನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ, 23 ಸಾವಿರಕ್ಕೂ ಹೆಚ್ಚು ಗಿಡಗಳನ್ನು ಮತ್ತು 38 ಟ್ರೀ ಗಾರ್ಡ್ಗಳನ್ನು ವಿತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.