ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಾತಾ ವೈಷ್ಣೋ ದೇವಿ ದೇಗುಲವು ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ತನಗೇ ಮೀಸಲಾದ ಆಂತರಿಕ ವಿಪತ್ತು ಸ್ಪಂದನಾ ಪಡೆಯನ್ನು ಹೊಂದಲಿದೆ.
ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಮ್ರಂದೀಪ್ ಸಿಂಗ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಯಾವುದೇ ಸಂಭವನೀಯ ಆಪತ್ತು ಸಂಭವಿಸಿದಲ್ಲಿ ಮೊದಲು ಸ್ಪಂದಿಸುವ ದೇಗುಲ ಮಂಡಳಿಯ ಸಿಬ್ಬಂದಿಗಳಿಗೆ ಈ ನಿಟ್ಟಿನಲ್ಲಿ ತರಬೇತಿ ನೀಡುವ ಕಾರ್ಯವನ್ನು ಈಗಾಗಲೇ ಪಂಜಾಬ್ನ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ 7 ನೇ ಬೆಟಾಲಿಯನ್ನ ಪ್ರಧಾನ ಕಚೇರಿಯಲ್ಲಿ ಆರಂಭವಾಗಿದೆ ಎಂದಿದ್ದಾರೆ.
ದೇವಾಲಯಕ್ಕಾಗಿ ಮೀಸಲಾದ ವಿಪತ್ತು ಸ್ಪಂದನಾ ಪಡೆಯೊಂದನ್ನು ಸಿದ್ಧಪಡಿಸುವ ಸಲುವಾಗಿ ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ 180 ಸಿಬ್ಬಂದಿಗಳಿಗೆ ತರಬೇತಿ ನೀಡಲು ದೇವಾಲಯ ಮಂಡಳಿ ಯೋಜಿಸುತ್ತಿದೆ ಎಂದು ಅವರು ಹೇಳಿದ್ದಾರೆ. ದೇವಾಲಯ ಮಂಡಳಿಯು ತನ್ನ ವಿಪತ್ತು ಸನ್ನದ್ಧತೆಯ ಭಾಗವಾಗಿ ತುರ್ತು ಕಾರ್ಯಾಚರಣೆ ಕೇಂದ್ರವನ್ನು ಸ್ಥಾಪಿಸಲು ಯೋಜಿಸುತ್ತಿದೆ.
ಮಾತಾ ವೈಷ್ಣೋ ದೇವಿ ದೇಗುಲವು ಜಮ್ಮು ಪ್ರದೇಶದ ರಿಯಾಸಿ ಜಿಲ್ಲೆಯ ತ್ರಿಕುಟಾ ಬೆಟ್ಟಗಳ ಮೇಲಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ಕಳೆದ ವರ್ಷ ವಿಶ್ವದಾದ್ಯಂತದ 86 ಲಕ್ಷ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.