ನವದೆಹಲಿ: ಭಾರತದೊಂದಿಗೆ ಕಾರ್ಯತಾಂತ್ರಿಕ ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮುಖ್ಯ ಗುರಿಯನ್ನು ಇಟ್ಟುಕೊಂಡು ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಜಪಾನಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವೆ ಮಾತುಕತೆ ಏರ್ಪಡಿಸಲು ಸಿದ್ಧತೆಗಳನ್ನು ನಡೆಸುವ ಸಲುವಾಗಿ ಪಾಂಪಿಯೊ ಅವರು ಮಂಗಳವಾರ ನವದೆಹಲಿಗೆ ಆಗಮಿಸುತ್ತಿದ್ದಾರೆ.
ಅಮೆರಿಕಾದಿಂದ ಆಮದು ಮಾಡಿದ ವೈದ್ಯಕೀಯ ಸಾಧನಗಳ ಮೇಲೆ ಭಾರತ ವಿಧಿಸಿದ ದರ, ಪ್ರಮುಖ ಯುಎಸ್ ಕಂಪನಿಗಳಾದ ಅಮೆಜಾನ್ ಮತ್ತು ವಾಲ್ಮಾರ್ಟ್ನ ಕಾರ್ಯಾಚರಣೆಗಳ ಮೇಲೆ ಷರತ್ತುಗಳನ್ನು ವಿಧಿಸುವ ಇ-ಕಾಮರ್ಸ್ ಮೇಲೆ ಭಾರತೀಯ ನಿಯಮ ಮುಂತಾದ ವಿಷಯಗಳ ಕುರಿತು ಭಾರತವು ಅಮೆರಿಕದೊಂದಿಗೆ ವಿವಾದಗಳಲ್ಲಿ ಸಿಲುಕಿದೆ.
ಭಾರತವನ್ನು ಆತಂಕ್ಕೀಡು ಮಾಡಿದ ಮತ್ತೊಂದು ವಿಷಯವೆಂದರೆ, ದೊಡ್ಡ ವಿದೇಶಿ ಸಂಸ್ಥೆಗಳಿಂದ ಸ್ಥಳೀಯ ದತ್ತಾಂಶ ಸಂಗ್ರಹಣೆಗೆ ಭಾರತ ಒತ್ತಾಯಿಸಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ವೃತ್ತಿಪರರಿಗೆ ಕೆಲಸದ ವೀಸಾಗಳ ಮೇಲೆ ಯುಎಸ್ ನಿರ್ಬಂಧ ಹೇರುವ ಸಾಧ್ಯತೆಯಿದೆ. ವಿದೇಶಾಂಗ ಇಲಾಖೆ ಗುರುವಾರ ಅಂತಹ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಹೇಳಿದ್ದರೂ ಸಹ ಆತಂಕ ಇದ್ದೇ ಇದೆ.
ಪುನರಾಯ್ಕೆಯಾಗಿರುವ ಮೋದಿ ಸರ್ಕಾರವು, ಅಮೆರಿಕದೊಂದಿಗಿನ ವಿವಾದಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ ಭಾರತ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು ಕೂಡ ಬಹು ಮುಖ್ಯವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಮೋದಿ ಮತ್ತು ಟ್ರಂಪ್ ನಡುವೆ ನಡೆಯಲಿರುವ ಮಾತುಕತೆ ಭಾರತೀ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.